ಬೆಳಗಾವಿ: ತಮ್ಮ ಅಮೋಘ ಉತ್ತರ ಕನ್ನಡ ಜವಾರಿ ಭಾಷೆಯ ಸೊಗಡಿನ ಅಭಿನಯದ ಮೂಲಕ ಟಿಕ್ ಟಾಕ್ ಮತ್ತು ಯೂಟೂಬ್ ಸ್ಟಾರ್ ಆಗಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿಯೂ ಮನೆ ಮಾತಾಗಿದ್ದ ಬೈಲಹೊಂಗಲ ತಾಲೂಕಿನ ತಿರುಳ್ಗನ್ನಡನಾಡು ಒಕ್ಕುಂದ ಗ್ರಾಮದ ಅಜ್ಜಿ ರುಕ್ಕಮ್ಮ ಲೋಕರಿ ವಯೋಸಹಜ ಕಾಯಿಲೆಯಿಂದ ಸೋಮವಾರ ಬೆಳಿಗ್ಗೆ ಮೃತರಾಗಿದ್ದಾರೆ.
ಹೌದು, ಟಿಕ್ ಟಾಕ್‌ನಲ್ಲಿ ತಮ್ಮ ವಿಭಿನ್ನ ಕಾಮಿಡಿ ವಿಡಿಯೋ ಮೂಲಕ ಈ ರುಕ್ಮವ್ವ ಅಜ್ಜಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿ ಮನರಂಜಿಸಿದ್ದರು. ಅಲ್ಲದೇ ಹಲವು ವಾಹಿನಿಗಳ ಕಾಮಿಡಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಇಳಿ ವಯಸ್ಸಿಲ್ಲಿಯೂ ತಮ್ಮಲ್ಲಿನ ಕಲೆಯನ್ನು ಪ್ರದರ್ಶಿಸಿದ್ದರು.
ಉತ್ತರಕರ್ನಾಟಕ ಶೈಲಿಯ ಬೈಗುಳಗಳಿಗೆ ಜನ ಫುಲ್ ಫಿದಾ ಆಗಿದ್ದರು. ಇದೀಗ ಅಜ್ಜಿಯ ನಿಧನಕ್ಕೆ ಗ್ರಾಮವೇ ಸೇರಿದಂತೆ ಅನೇಕರು ಕಂಬಿನಿ ಮಿಡಿದಿದ್ದಾರೆ.
ವಯೋಸಹಜ ಕಾಯಿಲೆಯಿಂದ ತಮ್ಮ ನಿವಾಸದಲ್ಲಿ 97ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅಜ್ಜಿಯ ಅಗಲಿಕೆಯಿಂದ ಕಾಮಿಡಿ ಲೋಕ ನಿಜಕ್ಕೂ ಬಡವಾಗಿದೆ. ಮೃತ ಅಜ್ಜಿಯ ಅಂತ್ಯಕ್ರಿಯೆಯನ್ನು ಗ್ರಾಮದ ಸ್ಮಶಾನದಲ್ಲಿ ಕುಟುಂಬಸ್ಥರು, ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿಸಲಾಯಿತು.
PublicNext
26/09/2022 08:46 pm