ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಡಾ.ಬಿ.ಆರ್.ಅಂಬೇಡ್ಕರ್‌ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಸಂಘ ಉದ್ಘಾಟನೆ

ಅಥಣಿ: ತಾಜ್ ಮಹಲ್ ಕಟ್ಟಿದವರು ಕಾರ್ಮಿಕರು. ಆದರೆ ಅದರ ಶ್ರೇಯಸ್ಸು ಮಾತ್ರ ಶಹಜಹಾನ್ ಗೆ ಸಲ್ಲುತ್ತದೆ. ಅದರಂತೆ ಪ್ರತಿ ಕಟ್ಟಡಗಳು ನಿರ್ಮಾಣ ವಾಗಬೇಕಾದರೆ ಅದಕ್ಕೆ ಕಾರ್ಮಿಕರ ಪರಿಶ್ರಮವೇ ಕಾರಣ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹೇಳಿದರು.

ಅವರು ಗುರುವಾರ ಕಾಗವಾಡ ತಾಲೂಕಿನ ಉಗಾರ ಬಿ.ಕೆ.ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಸಂಘವನ್ನ ಉದ್ಘಾಟಿಸಿ ಮಾತನಾಡುತ್ತಾ ದೇಶದ ಅತ್ಯುತ್ತಮ ಕಟ್ಟಡಗಳನ್ನು ನಿರ್ಮಾಣ ಮಾಡುವದರಲ್ಲಿ ಕಾರ್ಮಿಕರ ಪಾತ್ರ ಬಹುಮುಖ್ಯವಾಗಿದೆ ಇದರಿಂದಾಗಿ ನಮ್ಮ ಸಂಸ್ಕೃತಿಗೆ ಮಹತ್ತರವಾದ ಸ್ಪೂರ್ತಿ ಬಂದಿದೆ. ಕಾರ್ಮಿಕರು ವಿವಿಧ ಕಲೆಗಳಲ್ಲಿ ಕರಗತವಾದಂತವರಾಗಿದ್ದಾರೆ. ಹೀಗಾಗಿ ವಿಶ್ವಮಟ್ಟಕ್ಕೆ ಹೆಸರುವಾಸಿಯಾದ ತಾಜ್ ಮಹಲ್ ಗೋಳಗುಮ್ಮಟ, ಮೈಸೂರು ಅರಮನೆ, ಹೀಗೆ ಮುಂತಾದ ಕಟ್ಟಡಗಳನ್ನ ಕಟ್ಟಿ ಕಾರ್ಮಿಕರು ಅಜರಾಮರವಾಗಿದ್ದಾರೆ. ಆದರೆ ಈ ಎಲ್ಲ ಕಟ್ಟಡಗಳ ಶ್ರೇಯಸ್ಸು ಮಾತ್ರ ರಾಜಮಹಾರಾಜರಿಗೆ ಮತ್ತು ಶ್ರೀಮಂತರಿಗೆ ಸಲ್ಲುತ್ತದೆ. ಆದರೆ ಇನ್ನೂ ಕಾರ್ಮಿಕರ ಪರಿಸ್ಥಿತಿ ಇಂದಿಗೂ ಚಿಂತಾಜನಕವಾಗಿದೆ. ಅವರನ್ನ ಕಡಿಮೆ ಸಂಬಳದಲ್ಲಿ ಹೆಚ್ಚು ದುಡಿಸಿಕೊಳ್ಳುವ ಪ್ರವೃತ್ತಿ ಬೆಳೆದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ಅನಂತರ ಕಾರ್ಮಿಕ ಅಧಿಕಾರಿ ಮಹೇಶ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಭುಜಗೌಡ ಪಾಟೀಲ್ ವಹಿಸಿದ್ದರು, ಈ ವೇಳೆ ಹಿರಿಯ ಕಾರ್ಮಿಕ ನಿರೀಕಕರಾದ ಸಂಜೀವ ಭೋಸಲೆ, ಮಾಜಿ ತಾ.ಪಂ ಸದಸ್ಯರಾದ ಪೂಜಾರಿ, ಮಾಜಿ ಪುರಸಭೆ ಸದಸ್ಯರಾದ ವಿಜಯ ಅಸೋದೆ, ಶೇಡಬಾಳ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ರವಿ ಕಾಂಬಳೆ, ಡಾ.ಬಿ.ಆರ್.ಅಂಬೇಡ್ಕರ್ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಶ್ರಾವಣ ಕಾಂಬಳೆ, ಉಪಾಧ್ಯಕ್ಷರಾದ ಪಿಂಟು ಸಮಗಾರ, ಸಾಗರ ಪೂಜಾರಿ, ಶ್ರೀಧರ ಬೀರಣಗಿ ಹಾಗೂ ಗ್ರಾಪಂ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

30/09/2022 07:39 am

Cinque Terre

6 K

Cinque Terre

0

ಸಂಬಂಧಿತ ಸುದ್ದಿ