ಅಥಣಿ : ಸರ್ಕಾರದ ವಿವಿಧ ಯೋಜನೆಗಳಲ್ಲಿ ಅಕ್ರಮ ಫಲಾನುಭವಿಗಳಿಗೆ ಹಂಚಿಕೆಯಾದ ಅಕ್ಕಿಯ ದಾಸ್ತಾನು ಮೇಲೆ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು ತಾಲೂಕಿನ ತೆಲಸಂಗ ಗ್ರಾಮದಲ್ಲಿ 25 ಚೀಲ ಅಂದಾಜು 8 ಕ್ವಿಂಟಲ್ ಅಕ್ಕಿಯನ್ನು ಬುಧವಾರ ವಶಪಡಿಸಿಕೊಂಡಿದ್ದಾರೆ.
ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಅಕ್ರಮವಾಗಿ ಸಂಗ್ರಹ ಮಾಡಿಟ್ಟವರು ಅಕ್ಕಿ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಪಡಿತರ ಅಕ್ರಮ ಸಾಗಣೆ ದಂಧೆಕೋರರು ಬಿಪಿಎಲ್ ಕಾರ್ಡ್‌ದಾರರಿಂದಲೇ ಕೆಜಿಗೆ 10 ರಿಂದ 12 ರೂಪಾಯಿ ನೀಡಿ ಖರೀದಿಸುವುದು ಬೆಳಕಿಗೆ ಬಂದಿದೆ. ಖರೀದಿಸಿದ ಅಕ್ಕಿ ಪಾಲಿಷ್ ಮಾಡಿ ಕೆಜಿಗೆ ರೂ 25 ರೂ 30 ಗೆ ಬೇರೆ ಕಡೆ ಮಾರಾಟ ಮಾಡುತ್ತಿದ್ದಾರೆ. ಈ ರೀತಿ ರಹಸ್ಯವಾಗಿ ಸಾಗಣೆ ಮಾಡುವ ಸಂದರ್ಭದಲ್ಲಿ ಸಿಕ್ಕಿ ಬೀಳುತ್ತಿದ್ದಾರೆ ಎಂದು ಹೇಳುತ್ತಾರೆ ಅಧಿಕಾರಿಗಳು.
ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ ಪಡಿತರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರಾಟಮಾಡುವುದು ಕಂಡುಬಂದಲ್ಲಿ ಅಂಥವರ ಕಾರ್ಡ್ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ದಾಳಿಯಲ್ಲಿ ಆಹಾರ ನಿರೀಕ್ಷಕ ಶಬೀರ ಮುಜಾವರ, ಆಹಾರ ಶಿರಸ್ತೇದಾರ ಬಿ.ವಿ. ಅಗರಖೇಡ, ಬಿ.ಜಿ. ಈರಕರ, ಮಲ್ಲು ಸವಣೂರ, ಹುಸೇನ್ ಅರಟಾಳ ಸೇರಿದಂತೆ ಹಲವರು ಭಾಗವಹಿಸಿದ್ದರು.
Kshetra Samachara
15/09/2022 07:57 am