ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಬೆಳೆ ವಿಮೆ ಅವೈಜ್ಞಾನಿಕ ಸರ್ವೆ, ರೈತರಿಂದ ಪ್ರತಿಭಟಣೆ

ಅಥಣಿ : ಮಳೆ-ಗಾಳಿ, ಚಂಡಮಾರುತ ಸೇರಿದಂತೆ ಹವಾಮಾನ ವೈಪರೀತ್ಯಗಳ ಬಗ್ಗೆ ಸಾರ್ವಜನಿಕರಿಗೆ, ರೈತರಿಗೆ ಸೂಕ್ತ ಸಮಯದಲ್ಲಿ ಮಾಹಿತಿ ನೀಡಲೆಂದು ಹವಾಮಾನ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕಾಗಿ ಇತ್ತೀಚಿನ ದಿನಗಳಲ್ಲಿ ವಿಶೇಷ ತಂತ್ರಜ್ಞಾನ ಬಳಕೆಯಾಗುತ್ತಿದೆ. ಆದರೆ ವಿಶೇಷ ತಂತ್ರಜ್ಞಾನದಿಂದ ಸ್ಥಾಪಿಸಲ್ಪಟ್ಟ ಸಾಧನಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಮಳೆ ಅಥವಾ ಹವಾಮಾನದ ಬಗ್ಗೆ ನಿಖರ ಮಾಹಿತಿ ನೀಡಲು ಸಾಧ್ಯ.

ತೆಲಸಂಗ ಹೋಬಳಿಯಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆ ಇದ್ದರೂ ವಿಮೆ ಕೊಡುವುದರಲ್ಲಿ ಅವೈಜ್ಞಾನಿಕ ಸರ್ವೇ ಮಾಡಿ, ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ದ್ರಾಕ್ಷಿ ಬೆಳೆಗಾರರು ಟೇಲಿಮೆಟ್ರಿಕ್ ಮಳೆ ಮಾಪನ ಬಳಿ ತಲೆ ಮೇಲೆ ಕೈ ಇಟ್ಟುಕೊಂಡು ವಿಭಿನ್ನವಾಗಿ ಪ್ರತಿಭಟನೆ ಮಾಡಿದರು.

ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಮಳೆಮಾಪನ ಆಧಾರದ ಮೇಲೆ ವಿಮೆ ಕೊಡಲಾಗುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿನ ಮಳೆಮಾಪನವೇ ದುರಸ್ಥಿ ಸ್ಥಿತಿಯಲ್ಲಿದೆ. ಹಾಗಾದರೆ ಇವರು ಯಾವ ಆಧಾರದ ಮೇಲೆ ವಿಮೆ ಕ್ಷೇಮ್ ಹಾಕಿದರು ಎಂದು ಉತ್ತರಿಸಬೇಕು. ಒಂದು ಎಕರೆ ದ್ರಾಕ್ಷಿ ಬೆಳೆ ಮಾಡಲು ಕನಿಷ್ಠ ಎರಡು ಲಕ್ಷ ಹಣ ಖರ್ಚು ಬರುತ್ತೆ ಪ್ರಸಕ್ತ ವರ್ಷ 90 ರಷ್ಟು ದ್ರಾಕ್ಷಿ ಬೆಳೆ ಹವಾಮಾನ ವೈಫರಿತ್ಯದಿಂದ ಹಾಳಾಗಿದೆ, ಆದರೂ ಎಕರೆಗೆ 41 ಸಾವಿರ ವಿಮೆ ಹಣ ನೀಡಿದ್ದಾರೆ. ಈ ಅನ್ಯಾಯವನ್ನು ಸರಿಪಡಿಸಬೇಕು, ಹೋರಾಟ ದಿನದಿಂದ ದಿನಕ್ಕೆ ಈ ಉಗ್ರರೂಪ ತಾಳಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ತೆಲಸಂಗ ಉಪ ತಹಸೀಲ್ದಾರ್‌ ಕಚೇರಿ ಹತ್ತಿ ಅಲ್ಲಿರುವ ಮಳೆ ಮಾಪನದ ಎದುರು ಬಿಸಲಲ್ಲಿ ಸುಮಾರು 2 ತಾಸು ಕುಳಿತು ಪ್ರತಿಭಟಿಸಿದಲ್ಲದೆ ಅಧಿಕಾರಿ ಮತ್ತು ಜನ ಪ್ರತಿನಿಧಿಗಳ ಹಾಗೂ ವಿಮೇ ಕಂಪನಿ ವಿರುದ್ಧ ಪ್ರತಿಭಟನೆ ಕೂಗಿದರು.

ಈ ವೇಳೆ ಉಮೇಶ ಹನಗಂಡಿ, ಪ್ರಭಾಕರ್ ಮೋರೆ, ನಿವೃತ್ತಿ ಪೋಳ, ಈರಣ್ಣ ಸಕ್ತಿ, ಮಾಯಪ್ಪ ಸಾವಳಗಿ, ಸುಭಾಸ ಮೋರೆ, ರಸೂಲ್ ಮುಲ್ಲಾ, ದಿಲೀಪ್ ಖೋಬ್ರಿ, ಲಕ್ಕಪ್ಪ ನಾಟಕಾರ, ಗುಂಡುಬಾ ಪವರ್‌, ಮಾದೇವ ಪೂಜಾರಿ, ಸುರೇಶ ಪೂಜಾರಿ, ಪ್ರಕಾಶ ಸಕ್ರಿ, ಅಂಕುಶ ಮೋರೆ, ಲಕ್ಷ್ಮಣ ಶೇಲೆಪ್ಪಗೋಳ, ಸತ್ಯಪ್ಪ ಸಾವಳಗಿ, ರಾಮು ಚವ್ಹಾಣ, ಇನ್ನು ಮುಂತಾದವರು ಇದ್ದರು.

Edited By : PublicNext Desk
Kshetra Samachara

Kshetra Samachara

29/09/2022 09:27 am

Cinque Terre

6.54 K

Cinque Terre

0

ಸಂಬಂಧಿತ ಸುದ್ದಿ