ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ : ಟ್ಯಾಂಕ್ ನಲ್ಲಿ ಕುಸಿದು ಬಿದ್ದ ಪುರಸಭೆ ಸಿಬ್ಬಂದಿಗಳ ರಕ್ಷಣೆ

ಅಥಣಿ : ಅಥಣಿ ಪಟ್ಟಣದ ಉರ್ದು ಶಾಲೆಯ ಹತ್ತಿರ 12 ಅಡಿ ಆಳವಿರುವ ಚೆಂಬರನಲ್ಲಿ ಪೌಡರ್ ಸಿಂಪಡನೆ ಮಾಡಿ ಚೆಂಬರನ ವಾಲ್ ಬಂದ ಮಾಡಬೇಕೆಂದು ಟ್ಯಾಂಕನಲ್ಲಿ ಕೆಳಗಿಳಿದ ಸಂದರ್ಭದಲ್ಲಿ ಮೂವರು ಪುರಸಭೆ ಸಿಬ್ಬಂದಿಗಳಿಗೆ ಆಮ್ಲಜನಕ ಕೊರತೆಯಾಗಿ ಟ್ಯಾಂಕ್ ನಲ್ಲಿಯೇ ಕುಸಿದು ಬಿದ್ದಿವರನ್ನು ರಕ್ಷಣೆ ಮಾಡಿರುವ ಘಟನೆ ನಿನ್ನೆ (ಬುಧವಾರ) ನಡೆದಿದೆ.

ಟ್ಯಾಂಕ್ ಒಳಗೆ ಇಳಿದ ಸಿಬ್ಬಂದಿಗಳನ್ನು ಟ್ಯಾಂಕಿನ ಮೇಲಿರುವ ಮತ್ತೋರ್ವ ಪುರಸಭೆ ಸಿಬ್ಬಂದಿ ಕುಮಾರ ಮಾಳಿ ಗಮನಿಸಿ ಖುದ್ದಾಗಿ ಠಾಣೆಗೆ ಮಾಹಿತಿ ನೀಡಿದ ನಂತರ ತಕ್ಷಣ ಅಥಣಿ ಅಗ್ನಿಶಾಮಕ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಟ್ಯಾಂಕನಲ್ಲಿ ಬಿದ್ದಿದ್ದ ಪ್ರಕಾಶ ಅಶೋಕ ಕುಂಬಾರ (35 ), ಅಪ್ಪಾಸಾಬ ಅಥಣಿಕರ(40), ರಮೇಶ ಪೂಜಾರಿ (42) ಎಂಬುವವರನ್ನು ಜೀವಂತವಾಗಿ ಟ್ಯಾಂಕ್ ನಿಂದ ಹೊರ ತೆಗೆದು ರಕ್ಷಣೆ ಮಾಡಿದರು.

ಈ ರಕ್ಷಣಾ ಕಾರ್ಯಚರಣೆಯಲ್ಲಿ ರಾಜು ತಳವಾರ, ಎ.ಬಿ. ಬಡಚಿ, ಎಮ್.ಬಿ.ಬಿರಾದಾರ, ನೀಲಪ್ಪ ಹೇರವಾಡೆ, ಎಮ್.ಎಸ್. ಕುಂಬಾರ, ಸುರೇಶ ಮಾದರ, ಶಿವಪ್ಪ ಹಣಮಾಪೂರ, ರವೀಂದ್ರ ಸಂಗಮ, ಶಿವಾನಂದ ಶಿರಹಟ್ಟಿ,ಸಚೀನ ಹಲ್ಯಾಳ, ಶಿವಯ್ಯ ಮಠಪತಿ, ಸಂತೋಷ ಚೌಗುಲಾ, ಸಂತೋಷ ಧರ್ಮಟ್ಟಿ ಸೇರಿದಂತೆ ಇತರರು ಭಾಗವಹಿಸಿದ್ದರು.

Edited By : Nagesh Gaonkar
PublicNext

PublicNext

06/10/2022 10:08 am

Cinque Terre

35.63 K

Cinque Terre

0

ಸಂಬಂಧಿತ ಸುದ್ದಿ