ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಭೀಕರ ಸರಣಿ ರಸ್ತೆ ಅಪಘಾತ: ನಾಲ್ವರ ದುರ್ಮರಣ

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಬುದಿಗೊಪ್ಪ ಕ್ರಾಸ್ ಬಳಿ ಭೀಕರ ರಸ್ತೆ ಸರಣಿ ಅಪಘಾತ ಸಂಭವಿಸಿದ್ದು ನಾಲ್ಕು ಜನ ಮೃತ ಪಟ್ಟಿರುವ ಘಟನೆ ನಡೆದಿದೆ.

ಬೈಕ್ ಮೇಲೆ ಮೂರು ಪ್ರಯಾಣಿಕರು ತೆರಳುತ್ತಿದ್ದರು, ಅಪಘಾತದಲ್ಲಿ ಬೈಕ್ ಮೇಲೆ ಇದ್ದ ಅಜ್ಜಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ಮೇಲೆ ಇದ್ದ ಮತ್ತಿಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಹಾಗೂ ಈ ಸರಣಿ ಅಪಘಾತದಲ್ಲಿ ಕುಡಚಿ ಪೊಲೀಸ್ ಠಾಣೆಯ ಎಎಸ್ಐ ವೈ.ಎಂ ಹಲಕಿ ಅವರ ಪತ್ನಿ, ಪುತ್ರಿ ಮತ್ತು ಕಾರು ಚಾಲಕ ಮೃತಪಟ್ಟಿದ್ದಾರೆ. ಕಾರು ಚಾಲಕ ನಿಖಿಲ್ ಕದಂ(24) ಬೆಳಗಾವಿ ನಿವಾಸಿ, ರುಕ್ಮಿಣಿ ಹಳಕಿ(48), ಅಕ್ಷತಾ ಹಳಕಿ(22), ವೃದ್ಧೆ ಹನುಮವ್ವಾ ಚಿಕ್ಕಲಕಟ್ಟಿ ಎಂದು ಮೃತರನ್ನು ಗುರುತಿಸಲಾಗಿದೆ. ‌

ಸ್ವಿಫ್ಟ್ ಡಿಸೈರ್, ಬೈಕ್‌ಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಬೆಳಗಾವಿ ಬಾಗಲಕೋಟ ರಸ್ತೆಯ ಬೂದಿಗೊಪ್ಪ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ. ಲಾರಿ ಡಿಕ್ಕಿಯ ರಭಸಕ್ಕೆ ಸ್ವಿಫ್ಟ್ ಡಿಸೈರ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಎಸ್‌ಪಿ ಡಾ.ಸಂಜೀವ್ ಪಾಟೀಲ್ ದೌಡಾಯಿಸಿದ್ದು, ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

Edited By : Shivu K
PublicNext

PublicNext

25/09/2022 03:58 pm

Cinque Terre

38.37 K

Cinque Terre

0

ಸಂಬಂಧಿತ ಸುದ್ದಿ