ಬೆಂಗಳೂರು: ಬೆಸ್ಕಾಂ ತುರ್ತು ನಿರ್ವಹಣಾ ಕಾರ್ಯವನ್ನು ನಡೆಸುವುದರಿಂದ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಆಗಸ್ಟ್ 6ರ ಶನಿವಾರದಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಸರ್ ಎಂವಿ 220/66/11ಕೆ.ವಿ, ಜಿಐಎಸ್ ಇಡಿಸಿ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯವನ್ನು ನಡೆಸುವುದರಿಂದ ಕೆಲವು ಎಂಎಸ್ ಬಿಲ್ಡಿಂಗ್ ಸೇರಿದತೆ ಹಲು ಪ್ರದೇಶಗಳಲ್ಲಿ ವಿದ್ಯುತ್ ನಲ್ಲಿ ವ್ಯತ್ಯಯವಾಗಲಿದೆ.
ಯಾವ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ
ರೆಸಿಡೆನ್ಸಿ ರಸ್ತೆ, ಹೂಂಡೈ, ಲ್ಯಾವೆಲ್ಲೆ ರಸ್ತೆ, ವಾಲ್ಟನ್ ರಸ್ತೆ, ವಿಠಲ್ ಮಲ್ಯ ರಸ್ತೆ, ಚರ್ಚ್ ಸ್ಟ್ರೀಟ್, ಕಸ್ತೂರಿ ಬಾ ರಸ್ತೆ, ಸೇಂಟ್ ಮಾರ್ಕ್ ರಸ್ತೆ, ಕ್ವೀನ್ಸ್ ವೃತ್ತ, ರೆಸಿಡೆನ್ಸಿ ರಸ್ತೆ ಕ್ರಾಸ್, ಐಟಿಸಿ ಹೋಟೆಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಾಸವಾಗಲಿದೆ.
ವಿದ್ಯುತ್ ಸಂಬಂಧಿಸಿದಂತೆ ದೂರಿಗಾಗಿ ಬೆಂಗಳೂರು ವಿದ್ಯುತ್ ಕಂ ಯ ಹೆಲ್ಪ್ ಲೈನ್ ನಂಬರ್ 1912ಕ್ಕೆ ಸಂಪರ್ಕವನ್ನು ಮಾಡಲು ಬೆಸ್ಕಾಂ ತಿಳಿಸಿದೆ.
Kshetra Samachara
05/08/2022 06:44 am