ಬೆಂಗಳೂರು: ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಸ್ಕಾಂ ನಿರ್ವಹಿಸುತ್ತಿರುವ ನಿರ್ವಹಣೆ ಮತ್ತು ಇತರ ಉನ್ನತೀಕರಣ ಕಾರ್ಯಗಳಿಂದ ವಿದ್ಯುತ್ ಕಡಿತ ಉಂಟಾಗಲಿದೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್, ಜೆಪಿ ನಗರ, ಜಯನಗರ 8ನೇ ಬ್ಲಾಕ್, ದೊಮ್ಮಲೂರು, ಯಶವಂತಪುರದಲ್ಲಿ ಇಂದು ಪವರ್ ಕಟ್ ಇರಲಿದೆ.
ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಿದ್ದಯ್ಯ ರಸ್ತೆ, ಲಾಲ್‌ಬಾಗ್ ರಸ್ತೆ, ಸುಧಾಮನಗರ, ವಿಟ್ಲ ನಗರ, ಕುಮಾರಸ್ವಾಮಿ ಲೇಔಟ್, ಇಸ್ರೋ ಲೇಔಟ್, ವಸಂತ ವಲ್ಲಭ ನಗರ, ಶಾರದಾ ನಗರ, ಎಲ್‌ಐಸಿ ಕಾಲೋನಿ, ಜೆಪಿ ನಗರ 1 ನೇ ಹಂತ, ಜಯನಗರ 8ನೇ ಬ್ಲಾಕ್, ಪುಟ್ಟೇನಹಳ್ಳಿ ಮುಖ್ಯ ರಸ್ತೆ, ಬ್ಯಾಂಕ್ ಆಫ್ ಬರೋಡಾ ಏರಿಯಾಗಳಲ್ಲಿ ಪವರ್ವ್ಯತ್ಯಯವಾಗಲಿದೆ.
ಹಾಗೇ, ಚುಂಚಗಟ್ಟಾ ಗ್ರಾಮ, ಸುಪ್ರಜಾ ನಗರ, ಗಣಪತಿಪುರ, ಓಲ್ಡ್ ಬ್ಯಾಂಕ್ ಕಾಲೋನಿ, ಟೀಚರ್ಸ್ ಕಾಲೋನಿ, ಬೀರೇಶ್ವರ ನಗರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ಚುಂಚಗಟ್ಟಾ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ, ಜೆಪಿ ನಗರ 2ನೇ ಹಂತ, ಜೆಪಿ ನಗರ 3ನೇ ಹಂತ, ಜೆಪಿ ನಗರ 4ನೇ ಹಂತ, ಜೆಪಿ ನಗರ 5ನೇ ಹಂತ ಹಂತ, 15ನೇ ಕ್ರಾಸ್ ಜೆಪಿ ನಗರ, ಡಾಲರ್ಸ್ ಲೇಔಟ್, ದೊಮ್ಮಲೂರು, ದೊಡ್ಡ ನೆಕುಂದಿ, ಐಟಿಪಿಎಲ್ ಮುಖ್ಯರಸ್ತೆ, ಗಾಂಧಿನಗರ, ಭೋಗನಹಳ್ಳಿ ಮುಖ್ಯರಸ್ತೆ, ಪಾಣತ್ತೂರು ಮುಖ್ಯರಸ್ತೆ, ಹೊಂಗಸಂದ್ರ, ಪವಮಾನ ನಗರ 8 ಮತ್ತು 9ನೇ ಹಂತ, ಜುನ್ನಸಂದ್ರ ಮುಖ್ಯರಸ್ತೆಯಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ.
ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ 12ರವರೆಗೆ ವಿದ್ಯುತ್ ಕಡಿತವಾಗಲಿದೆ. ರಾಮಮೂರ್ತಿನಗರ ಮುಖ್ಯರಸ್ತೆ, ಮಾರ್ಗೊಂಡನಹಳ್ಳಿ, ಉದಯನಗರ, ಕೆ.ಜಿ. ಪುರ, ಇಂದಿರಾಗಾಂಧಿ ನಗರ, ರಾಮ್ ನಂಜಪ್ಪ ಲೇಔಟ್, ಉಮರ್ ನಗರ, ನಾಗವಾರ, ಚಾಣಕ್ಯ ಲೇಔಟ್, ಗೆದ್ದಲಹಳ್ಳಿ, ಕಾಫಿ ಬೋರ್ಡ್ ಲೇಔಟ್ ಮತ್ತು ಕಚಮಾರನಹಳ್ಳಿದಲ್ಲಿ ಪವರ್ ಕಟ್ ಇರಲಿದೆ.
ಬೆಂಗಳೂರಿನ ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವೈಯಾಲಿಕಾವಲ್, ಯಶವಂತಪುರದ ಕೆಲವು ಭಾಗಗಳು, ಮುನೇಶ್ವರ ಸ್ವಾಮಿ ಲೇಔಟ್, ಸಿದ್ದೇಶ್ವರ ಲೇಔಟ್, ಮಾವಳ್ಳಿಪುರ, ಶಬರಿನಗರ, ತಿರುಮೇನಹಳ್ಳಿ, ಬಾಗಲೂರು ಮುಖ್ಯರಸ್ತೆ, ದ್ವಾರಕಾ ನಗರ 1ನೇ ಮುಖ್ಯರಸ್ತೆ, ಜಕ್ಕೂರು ಮುಖ್ಯರಸ್ತೆ ಹತ್ತಿರ, ಗಂಗಾನಗರ, ಆರ್‌ಬಿಐ ಕಾಲೋನಿ, ಕೆಪಾರಾಸ್ ಕಾಲೋನಿ, ಕೆಪಾರಾಸ್ ಕಾಲೋನಿ, ಕೆಪಾರಳ್ಳಿ , ಹೆಸರಘಟ್ಟ ಮುಖ್ಯ ರಸ್ತೆ, ಬಾಗಲಗುಂಟೆ, ಭುವನೇಶ್ವರಿ ನಗರ, ಕಲ್ಯಾಣ ನಗರ ಮತ್ತು ರಾಜೀವ್ ಗಾಂಧಿ ನಗರದಲ್ಲಿ ಕರೆಂಟ್ ಇರುವುದಿಲ್ಲ.
Kshetra Samachara
20/01/2022 12:46 pm