ಬೆಂಗಳೂರು : ನಾಳೆ ಡಿ.21 ಮತ್ತು 22 ರಂದು ನಗರದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಡಿಸೆಂಬರ್ 21ರಂದು ಎಲ್ಲಿ ವಿದ್ಯುತ್ ವ್ಯತ್ಯಯ
ದಕ್ಷಿಣ ವಲಯದ ವಿನಾಯಕನಗರ, ಸಿದ್ದಾಪುರ, ಕುಮಾರಸ್ವಾಮಿ ಲೇಔಟ್, ಈಶ್ವರ ಲೇಔಟ್, ಆರ್ಬಿಐ ಲೇಔಟ್, ಎಲ್ಐಸಿ ಕಾಲೋನಿ, ಕೆ.ಆರ್. ರಸ್ತೆ, ಬನಶಂಕರಿ 2ನೇ ಹಂತ, ಆರ್.ಕೆ. ಲೇಔಟ್, ಉತ್ತರಹಳ್ಳಿ, ಜೆ.ಪಿ. ನಗರ 5ನೇ ಹಂತ, ಆಸ್ಟಿನ್ ಟೌನ್, ನೀಲಸಂದ್ರ, ರಿಂಗ್ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ ಮತ್ತು ನಾರಾಯಣ ನಗರ ಹೊರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ.
ಇನ್ನು ಉತ್ತರ ವಲಯದ ನೇತಾಜಿ ವೃತ್ತ, ಪಂಪಾ ನಗರ, ಎಚ್ಎಂಟಿ ಇಂಡಸ್ಟ್ರಿ, ಅತ್ತೂರು ಲೇಔಟ್, ಬಾಲಾಜಿ ಲೇಔಟ್, ಬಾಲಾಜಿ ಲೇಔಟ್, ಮಾರುತಿ ನಗರ, ಕೆನರಾ ಬ್ಯಾಂಕ್ ಲೇಔಟ್, ನರಸೀಪುರ, ಹೆಗಡೆ ನಗರ, ಸಂಪಿಗೆ ಹಳ್ಳಿ, ಅಗ್ರಹಾರ ರಸ್ತೆ, ಹೆಸರಘಟ್ಟ ಮುಖ್ಯರಸ್ತೆ, ಎಜಿಬಿಜಿ ಲೇಔಟ್ ಮತ್ತು ಶೆಟ್ಟಿಹಳ್ಳಿಯ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5.30 ರವರೆಗೆ ವಿದ್ಯುತ್ ಕಡಿತವಾಗಲಿದೆ.
ಪಶ್ಚಿಮ ವಲಯದ ಜಡ್ಜ್ ಕಾಲೋನಿ, ಮಾಳಗಾಲ, ಮೈಸೂರು ಮುಖ್ಯರಸ್ತೆಯ ಎದುರು ಬಿಎಚ್ಇಎಲ್, ಚಾಮರಾಜಪೇಟೆ, ಡಿವಿಜಿ ರಸ್ತೆ, ಗಾಂಧಿ ಬಜಾರ್ ರಸ್ತೆ, ಬಾಲಾಜಿ ಲೇಔಟ್, ದೊಡ್ಡಬಳ್ಳಿ ರಸ್ತೆ, ಟಿ.ಜಿ. ಪಾಳ್ಯ ಮುಖ್ಯರಸ್ತೆ, ಸಿದ್ಧಿವಿನಾಯಕ ರಸ್ತೆ, ಗಾಂಧಿ ನಗರ, ಉಪಕಾರ್ ಲೇಔಟ್, ಕುವೆಂಪು ಮುಖ್ಯರಸ್ತೆ ಮತ್ತು ಗಂಗಾನಗರದ ಮುಂತಾದ ಪ್ರದೇಶಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 5.30ರ ನಡುವೆ ವಿದ್ಯುತ್ ಕಡಿತವಾಗುವ ನಿರೀಕ್ಷೆಯಿದೆ.
ಪೂರ್ವ ವಲಯದ ಇಂದಿರಾನಗರ 12ನೇ ಮುಖ್ಯರಸ್ತೆ, ಜೋಗುಪಾಳ್ಯ, ಕೇಂಬ್ರಿಡ್ಜ್ ಲೇಔಟ್, ಸದಾನಂದ ನಗರ, ವರ್ತೂರು ರಸ್ತೆ, ನಾಗವಾರ ಪಾಳ್ಯ, ಉದಯನಗರ, ಎಚ್ ಆರ್ ಬಿಆರ್ ಲೇಔಟ್, ಜಯಂತಿ ನಗರ, ಚನ್ನಸಂದ್ರ ಮತ್ತು ಪಟ್ಟಂದೂರು ಅಗ್ರಹಾರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ಕಡಿತಗೊಳ್ಳುವ ಸಾಧ್ಯತೆ ಇದೆ.
ಡಿಸೆಂಬರ್ 22ರಂದು ಎಲ್ಲೆಲ್ಲಿ ವಿದ್ಯುತ್ ಕಡಿತ
ಬುಧವಾರದಂದು ದಕ್ಷಿಣ ವಲಯದ ಪ್ರದೇಶಗಳಾದ ನಂಜಪ್ಪ ರಸ್ತೆ, ಸಿದ್ದಾಪುರ, ಬಿಕಾಸಿಪುರ, ಜರಗನಹಳ್ಳಿ, ಮೊನೊಟೈಪ್ ರಸ್ತೆ, ಕನಕಪುರ ರಸ್ತೆ, ಪದ್ಮನಾಭನಗರ, ಜೆ.ಪಿ. ನಗರ 2ನೇ ಹಂತ, ಜೆಪಿ ನಗರ 3ನೇ ಹಂತ, ಜೆಪಿ ನಗರ 4ನೇ ಹಂತ, 5ನೇ ಹಂತ, ಜೆಪಿ ನಗರ 15ನೇ ಕ್ರಾಸ್, ಡಾಲರ್ಸ್ ಲೇಔಟ್, ಕಾವೇರಿ ನಗರ, ಕತ್ರಿಗುಪ್ಪೆ, ಬನಶಂಕರಿ 3ನೇ ಹಂತ, ನಾಯ್ಡು ಲೇಔಟ್, ಜಯನಗರ 8ನೇ ಬ್ಲಾಕ್, ಕೋರಮಂಗಲ 6ನೇ ಬ್ಲಾಕ್, ನಾಗಸಂದ್ರ, ಸಹಕಾರ ಆಸ್ಪತ್ರೆ ರಸ್ತೆ, ಎಇಸಿಎಸ್ ಲೇಔಟ್, ಕೆಎಂಎಫ್ ರಸ್ತೆ, ಮೈಕೋ ಲೇಔಟ್, ಅರೆಕೆರೆ, ಕ್ಲಾಸಿಕ್ ಲೇಔಟ್, ನಾರಾಯಣ ನಗರ 1ನೇ ಬ್ಲಾಕ್. ಶ್ರೇಯಸ್ ಕಾಲೋನಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರ ನಡುವೆ ವಿದ್ಯುತ್ ವ್ಯತ್ಯವಾಗಲಿದೆ.
ಉತ್ತರ ವಲಯದಲ್ಲಿ ಎಚ್ಎಂಎಸ್ ಕಂಪೌಂಡ್, ಎನ್.ಎಸ್. ಅಯ್ಯಂಗಾರ್ ರಸ್ತೆ, ಸದಾಶಿವನಗರ, ನ್ಯೂ ಬಿಇಎಲ್ ರಸ್ತೆ, ಮಾಡೆಲ್ ಕಾಲೊನಿ, ಕಲ್ಯಾಣ ನಗರ ಮುಖ್ಯರಸ್ತೆ, ಬಾಲಾಜಿ ಲೇಔಟ್, ಮಾರುತಿ ನಗರ, ವಿದ್ಯಾರಣ್ಯಪುರ, ಎಸ್ಆರ್ಎಸ್ ಲೇಔಟ್, ಹೆಗಡೆ ನಗರ, ಜಿಕೆವಿಕೆ ಲೇಔಟ್, ಅಗ್ರಹಾರ ರಸ್ತೆ, ಸಾತನೂರು, ಕಲಾಸ್ತ್ರೀ ನಗರ, ರವೀಂದ್ರ ನಗರ ಮತ್ತು ಕಲ್ಯಾಣ್ ನಗರದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರ ನಡುವೆ ವಿದ್ಯುತ್ ಕಡಿತವಾಗಲಿದೆ.
ಪಶ್ಚಿಮ ವಲಯದ ಬಿಇಎಂಎಲ್ ಲೇಔಟ್, ಮಾಳಗಾಲ, ಮೈಸೂರು ರಸ್ತೆ ಎದುರು ಬಿಎಚ್ಇಎಲ್, ಟಿಂಬರ್ ಲೇಔಟ್, ಗಿರಿನಗರ, ವಿದ್ಯಾಪೀಠ ರಸ್ತೆ, ಬಿಜಿಎಸ್ ಆಸ್ಪತ್ರೆ ರಸ್ತೆ, ಆಚಾರ್ಯ ಕಾಲೇಜು, ಸಿಂಡಿಕೇಟ್ ಬ್ಯಾಂಕ್ ಲೇಔಟ್, ರಾಬಿನ್ ಥಿಯೇಟರ್, ಉತ್ತರಹಳ್ಳಿ ರಸ್ತೆ, ಬಿಇಎಲ್ 1 ಮತ್ತು 2ನೇ ಹಂತ, ಮತ್ತು ಎಸ್ಐಆರ್ಎಂವಿ. 3 ಮತ್ತು 5ನೇ ಬ್ಲಾಕ್ನಲ್ಲಿ ಬುಧವಾರ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ವಿದ್ಯುತ್ ಕಡಿತವಾಗಲಿದೆ.
ಪೂರ್ವ ವಲಯದ ಜೋಗುಪಾಳ್ಯ ರಸ್ತೆ, ಕೇಂಬ್ರಿಡ್ಜ್ ಲೇಔಟ್, ಡಬಲ್ ರಸ್ತೆ, 11ನೇ ಮುಖ್ಯ ದೊಮ್ಮಲೂರು, ಕೆ.ಜಿ. ಪುರ, ಹನುಮಂತಯ್ಯ ಗಾರ್ಡನ್, ಡೇವಿಸ್ ರಸ್ತೆ, ವೀಲರ್ ರಸ್ತೆ, ಹಚಿನ್ಸ್ ರಸ್ತೆ, ಅಶೋಕ ರಸ್ತೆ, ಡಿಕೋಸ್ಟಾ ಲೇಔಟ್, ವಿವೇಕಾನಂದ ನಗರ, ಜೈಭಾರತ ನಗರ, ಸಿ.ಕೆ. ಗಾರ್ಡನ್, ಮಂಜುನಾಥನಗರ, ಮಾನ್ಯತಾ ರೆಸಿಡೆನ್ಸಿ ಮತ್ತು ಗಾಯತ್ರಿ ಲೇಔಟ್ ನಲ್ಲಿ ಬೆಳಗ್ಗೆ 10ರಿಂದ ಸಂಜೆ 5ರ ನಡುವೆ ವಿದ್ಯುತ್ ವ್ಯತ್ಯಯ ಸಾಧ್ಯತೆ ಇದೆ.
Kshetra Samachara
20/12/2021 10:47 pm