ಬೆಂಗಳೂರು: ಒಂದು ವಾರಗಳ ಇವಿ ಅಭಿಯಾನದ ಭಾಗವಾಗಿ ಬೆಸ್ಕಾಂ ಆಯೋಜಿಸಿದ್ದ ಇವಿ ರ್‍ಯಾಲಿಯನ್ನು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರು ಉದ್ಘಾಟಿಸಿದರು.
ವಿಧಾನಸೌಧದಿಂದ ಅರಮನೆ ಮೈದಾನದ ಚಾಮರ ವಜ್ರ ಸಭಾಂಗಣದವರೆಗೆ ಇಲೆಕ್ಟ್ರಿಕ್ ದ್ವಿಚಕ್ರವನ್ನು ತಾವೇ ಚಲಾಯಿಸುವ ಮೂಲಕ ಸಚಿವರು ಇವಿ ರ್‍ಯಾಲಿಗೆ ಚಾಲನೆ ನೀಡಿದರು. ಸುಮಾರು 300 ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಇವಿ ರ್‍ಯಾಲಿಯಲ್ಲಿ ಭಾಗವಹಿಸಿದ್ದವು.
ಇನ್ನು ಹಸಿರು ಇಂಧನ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸಲು ಬೆಸ್ಕಾಂ ಇವಿ ರ್‍ಯಾಲಿಯನ್ನು ಹಮ್ಮಿಕೊಂಡಿತ್ತು. ಇವಿ ಬಳಕೆಯನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಲು ರಾಜ್ಯ ಸರಕಾರ ನಿರಂತರ ಕಾರ್ಯಕ್ರಮಗಳನ್ನು ಹೊಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರು ದೇಶದ ಇವಿ ರಾಜಧಾನಿಯಾಗಲಿದೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದರು.
ಸ್ಲಗ್
PublicNext
02/07/2022 08:33 pm