ವರದಿ: ಬಲರಾಮ್ ವಿ
ಬೆಂಗಳೂರು: ಬೆಂಗಳೂರು ಪೂರ್ವ ತಾಲೂಕು ಮಹದೇವಪುರ ಕ್ಷೇತ್ರದ ಖಾಜಿ ಸೊಣ್ಣೇನಹಳ್ಳಿ ಗ್ರಾಮದಲ್ಲಿ ಶ್ರೀ ಮುನೇಶ್ವರ ಸ್ವಾಮಿ, ಸಪಲಮ್ಮ ಹಾಗೂ ಚೌಡೇಶ್ವರಿ ದೇವಿಗಳ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.
ಅಕರ್ಷಕ ದೀಪದಾರತಿಗಳೊಂದಿಗೆ, ದೇವರುಗಳ ಉತ್ಸವ ಮೂರ್ತಿಗಳ ಮೆರವಣಿಗೆ ನೋಡುಗರ ಮನಸೂರೆಗೊಂಡಿತ್ತು. ಇದೇ ಸಂದರ್ಭದಲ್ಲಿ ತೊಗಟ ವೀರರು ಚೌಡೇಶ್ವರಿ ದೇವಿಗೆ ರಕ್ತ ಬಲಿ ನೀಡುವ ಬಲಿಹಾರ ಕಾರ್ಯಕ್ರಮ ನಡೆಸಿದರು.
Kshetra Samachara
11/05/2022 08:28 am