ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯುಗಾದಿ ಹಬ್ಬದ ಪ್ರಿಪರೇಶನ್..!

ಬೆಂಗಳೂರು: ಹೊಸ ವರ್ಷದ ಮೊದಲ ಹಬ್ಬವನ್ನ ಬರಮಾಡಿಕೊಳ್ಳೋದಕ್ಕೆ ನಗರದ ಜ‌ನ ಬಹಳ‌ ಕಾತುರದಿಂದ ಕಾಯ್ತುತ್ತಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಎಲ್ಲೆಡೆ ಹರುಷ‌ ಮನೆ ಮಾಡಿದೆ. ಸಿಟಿಯ ಮಂದಿ ಹಬ್ಬದ ಸಿದ್ದತ್ತೆಯಲ್ಲಿ‌ ಮುಂದಾಗಿದ್ದಾರೆ. ಹಾಗಿದ್ರೆ ಈ ಯುಗಾದಿ ಹಬ್ಬಕ್ಕೆ ಹೇಗೆಲ್ಲ ಪ್ರಿಪರೇಶನ್ ಮಾಡ್ತಿದ್ದಾರೆ, ಏನೆಲ್ಲ ಕೊಂಡುಕೊಳ್ಳೋದ್ರಲ್ಲಿ ಬ್ಯೂಸಿಯಾಗಿದ್ದಾರೆ, ಹಬ್ಬದ ವಾತಾವರಣ ಹೇಗೆ ಕ್ರಿಯೇಟ್ ಆಗ್ತಿದೆ ಅಂತ ನೋಡೋಣ ಬನ್ನಿ..

ಗಿಜಿ-ಗಿಜಿ ಅನ್ನುವ ಮಾರುಕಟ್ಟೆಯಲ್ಲಿ ಹೂ, ತರಕಾರಿ, ದಿನಸಿ, ಕೊಂಡುಕೊಳ್ಳುತ್ತಿರುವ ಗ್ರಾಹಕರು ಒಂದು ಕಡೆಯಾದ್ರೆ, ಹಬ್ಬಕ್ಕೆ ಹೊಸ ಬಟ್ಟೆ ಖರೀದಿ ಮಾಡ್ತಿರುವವರು ಜನರು ಮತ್ತೊಂದು ಕಡೆ, ಇದೆಲ್ಲವೂ ಮಾರುಕಟ್ಟೆಯ ಹಬ್ಬದ ದೃಶ್ಯಗಳು.

ಇನ್ನು ಬಟ್ಟೆ, ತರಕಾರಿ, ಹೂ ಎಲ್ಲದರಲ್ಲೂ ರೇಟ್ ಜಾಸ್ತಿ ಆಗಿದೆ. ಆದ್ರು ಕೂಡ ಜನ ಮುಗಿಬಿದ್ದು ತೆಗೆದುಕೊಳ್ತಿದ್ದಾರೆ. ಯಾಕಂದ್ರೆ ಕಳೆದ ಬಾರಿ ಕೋವಿಡ್‌ನಿಂದ ಹಬ್ಬವನ್ನ ಆಚರಣೆ ಮಾಡಿದ್ದು ಅಷ್ಟಕಷ್ಟೇ. ಹೀಗಾಗಿ ಈ ಬಾರಿ ಯುಗಾದಿಯನ್ನ ಗ್ರಾಂಡ್ ಆಗಿ ಆಚರಿಸುತ್ತಿರುವ ಮಂದಿ ಬೆಲೆ ಲೆಕ್ಕಿಸದೆ ಹಬ್ಬದ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ..

ನಗರದ ಎಲ್ಲರಿಗೂ ಪಬ್ಲಿಕ್ ನೆಕ್ಸ್ಟ್ ವತಿಯಿಂದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು, ಎಲ್ಲರೂ ಬೇವು ಬೆಲ್ಲ ತಿನ್ನಿ, ಕಹಿಯ ಮಾತುಗಳನ್ನ ಅಲ್ಲೆ ಬಿಟ್ಟು, ಸಿಹಿಯನ್ನು ಹಂಚುತ್ತಾ ಜೀವನ ಸಾಗಿಸಿ.. ಮತ್ತೊಮ್ಮೆ ಹಬ್ಬದ ಶುಭಾಶಯಗಳನ್ನ ಕೋರತ್ತ,

ರಂಜಿತಾ ಸುನಿಲ್, ಪಬ್ಲಿಕ್‌ ನೆಕ್ಸ್ಟ್, ಬೆಂಗಳೂರು

Edited By :
PublicNext

PublicNext

01/04/2022 07:26 pm

Cinque Terre

24.75 K

Cinque Terre

0

ಸಂಬಂಧಿತ ಸುದ್ದಿ