ಕೆ.ಆರ್ .ಪುರ: ಬೆಂಗಳೂರು ಪೂರ್ವ ತಾಲೂಕು ಆಡಳಿತ ಹಾಗೂ ಕೆಆರ್ ಪುರದ ಬಲಿಜ ಸಮುದಾಯ ವತಿಯಿಂದ ಕೆಆರ್ ಪುರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಕೈವಾರ ಯೋಗಿ ನಾರೇಯಣ ಯತೀಂದ್ರ ಅವರ 296ನೇ ಜಯಂತ್ಯುತ್ಸವವನ್ನು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹಾಗೂ ಶಾಸಕ ಅರವಿಂದ ಲಿಂಬಾವಳಿ ಉದ್ಘಾಟಿಸಿದರು.
ಬಳಿಕ ಶಾಸಕ ಲಿಂಬಾವಳಿ ಮಾತನಾಡಿ, ಯೋಗಿ ನಾರೇಯಣ ಅವರು ಹೋಳಿ ಹುಣ್ಣಿಮೆ ದಿನದಂದು ಜನಿಸಿದ ಕಾರಣ ಮುಂದಿನ ವರ್ಷಗಳಲ್ಲಿ ಹೋಳಿ ಹುಣ್ಣಿಮೆ ದಿನದಂದು ಅವರ ಜಯಂತಿ ಆಚರಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಕಾರ್ಯಕ್ರಮಕ್ಕೂ ಮುನ್ನ ಯೋಗಿ ನಾರೇಯಣ ಅವರ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
Kshetra Samachara
27/03/2022 06:33 pm