ಬೆಂಗಳೂರು: ಬೆಂಗಳೂರಿನ ಸರ್ಜಾಪುರ ಸಮೀಪದ ಚಿಕ್ಕತಿರುಪತಿಯ ಜೋಡಿಗ್ರಾಮ ಅಂಚೆಮುಸ್ಕೂರು ಈಗ ತಿಮ್ಮಪ್ಪನಷ್ಟೆ ಪ್ರಸಿದ್ಧ.
ಚಿಕ್ಕಬಳ್ಳಾಪುರ ಕೈವಾರದ ಯೋಗಿ ನಾರಾಯಣಪ್ಪ ಹರಿಭಕ್ತರಾಗಿ, ಕಾಲಜ್ಞಾನಿಯಾಗಿ ಧಾರ್ಮಿಕ ಚಿಂತಕರಾಗಿ ಆಂದ್ರ ಮತ್ತು ಕರ್ನಾಟಕದ ಗಡಿಭಾಗದಲ್ಲಿ ಭಕ್ತಿ & ಸಾಂಸ್ಕೃತಿಕ ರಾಯಬಾರಿಯಂತೆ ಸಮಾಜವನ್ನ ಸನ್ಮಾರ್ಗದತ್ತ ನಡೆಸಿದ್ದರು.
1726ರಲ್ಲಿ ಆಂದ್ರದಲ್ಲಿ ಜನಿಸಿದ ಬಳೆಗಾರ ನಾರಾಯಣಪ್ಪ 1836ರ ವರೆಗೂ ಕೀರ್ತನೆ, ತತ್ವಪದ ಮತ್ತು ಕಾಲಜ್ಞಾನ ಬರವಣಿಗೆಯಿಂದ ಮನೆ ಮಾತಾಗಿದ್ದಾರೆ.
ಬಯಲುಸೀಮೆಯ ಪ್ರತಿ ಊರು- ಗ್ರಾಮಗಳಲ್ಲಿ ಕೈವಾರ ತಾತಯ್ಯನ ದೇವಸ್ಥಾನ ಇವೆ ಎಂದರೆ ಅವರ ಮೇಲೆ ಜನಕ್ಕೆ ಎಷ್ಟು ಭಕ್ತಿ ಎಂಬುದು ಗೊತ್ತಾಗ್ತದೆ. ಅಂಚೆಮುಸ್ಕೂರಿನ ಭಕ್ತರು ದೇಣಿಗೆ ಪಡೆದು ಕೈವಾರ ತಾತಯ್ಯನ ದೇವಸ್ಥಾನ ನಿರ್ಮಿಸಿದ್ದಾರೆ.
ಮಾರ್ಚ್ 18 ರಂದು ಹೊಸಕೋಟೆ, ಯಲಹಂಕ ಮತ್ತು ಕೈವಾರಗಳಲ್ಲಿ ಇನ್ನು ಎರಡನೇ ಕೈವಾರ ಎಂದೇ ಪ್ರಸಿದ್ಧಿಯಾದ ಚಿಕ್ಕತಿರುಪತಿಯ ಅಂಚೆಮುಸ್ಕೂರಿನಲ್ಲಿ ಕೈವಾರ ತಾತಯ್ಯನವರ ಜಯಂತಿ ಜರುಗಿತು.
ಕೈವಾರ ಧಾರ್ಮಿಕ, ಆಧ್ಯಾತ್ಮಿಕ ಕೇಂದ್ರವಾಗಿ ಸಮಾಜಮುಖಿಯಾಗಿ ಗುರ್ತಿಸಿಕೊಂಡಿದೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..
PublicNext
19/03/2022 10:40 pm