ಬೊಮ್ಮನಹಳ್ಳಿ: ಬೆಂಗಳೂರು ಐತಿಹಾಸಿಕ ಕರಗ ಉತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಾಗಿದ್ದು ಕರಗ ಉತ್ಸವವನ್ನು ಆಚರಿಸಲು ಅನುದಾನ ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯ ತಿಗಳ ಕ್ಷತ್ರಿಯ ಮಹಾಸಭಾ (ರಿ) ಶಾಸಕ ಸತೀಶ್ ರೆಡ್ಡಿ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರಿಗೆ ಮನವಿ ಮಾಡಿದೆ.
ಕಳೆದ ಎರಡು ವರ್ಷದಿಂದ ಬೆಂಗಳೂರು ಕರಗ ಉತ್ಸವಕ್ಕೆ ಬ್ರೇಕ್ ಬಿದ್ದಿತ್ತು.ಕೇವಲ ಧಾರ್ಮಿಕ ಆಚರಣೆಗಳಿಗೆ ಮಾತ್ರ ಅನುಮತಿ ಕೊಡಲಾಗಿತ್ತು. ಸದ್ಯ ಕೊರೊನಾ ಕಡಿಮೆಯಾಗಿ ಪರಿಸ್ಥಿತಿ ಸುಧಾರಿಸಿದ್ದು, ಬೆಂಗಳೂರು ಕರಗ ಉತ್ಸವಕ್ಕೆ ಸಿಗ್ನಲ್ ಕೊಟ್ಟಿದೆ. ಎರಡು ವರ್ಷಗಳ ಬಳಿಕ ಮತ್ತೆ ದ್ರೌಪದಮ್ಮ ದೇವಿಯ ಸಂಚಾರ ರಸ್ತೆಗಳಲ್ಲಿ ಸಾಗಲಿದೆ. ಬೆಂಗಳೂರಿನ ಕರಗ ಉತ್ಸವವನ್ನು ಉತ್ಸವವನ್ನು ಕಣ್ತುಂಬಿಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದಾರೆ.
PublicNext
04/03/2022 05:23 pm