ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರ: ಶಿವರಾತ್ರಿಯ ಶಿವಸ್ಮರಣೆಗೆ ಉಪವಾಸ ಅಷ್ಟೇ ಯಾಕೆ? ಇಲ್ಲಿ ಭರ್ಜರಿ ಬಾಡೂಟವೂ ಇರುತ್ತೆ

ರಾಮನಗರ: ಶಿವರಾತ್ರಿ ಅಂದ್ರೆ ಉಪವಾಸ, ಶಿವಸ್ಮರಣೆ ಎಲ್ಲೆಲ್ಲೂ ನಮಃ ಶಿವಾಯ ಭೀಜಾಕ್ಷರ ಮಂತ್ರಗಳೇ ಕೇಳಿ ಬರುತ್ತೆ. ಇದ್ರ ಜೊತೆಗೆ ತೀರ್ಥ ಪ್ರಸಾದ ದಾಸೋಹ ಕೂಡ ಇರುತ್ತೆ. ಇನ್ನು ಶಿವರಾತ್ರಿ ದಿನ ಮಾಂಸಹಾರಿಗಳು ಸಹ ಮಡಿ ಮೈಲಿಗೆ ಅಂತ ಶಿವ ಧ್ಯಾನ ಮಾಡ್ತಾರೆ. ಆದ್ರೆ ಈ ಒಂದು ದೇವಸ್ಥಾನದಲ್ಲಿ ಮಾತ್ರ ಬೇರೆಯದ್ದೇ ಪರಂಪರೆ ಇದೆ.

ಯೆಸ್..ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮಂಗಾಡಹಳ್ಳಿ ಗ್ರಾಮದಲ್ಲಿ ಮಹಾಶಿವರಾತ್ರಿ ದಿನದಂದು ಬಾಡೂಟವೇ ಪ್ರಧಾನವಾಗಿರುತ್ತೆ. ಹತ್ತಾರು ಹಳ್ಳಿಯ ಜನರು ಒಂದೆಡೆ ಸೇರಿ ಮಾಂಸಹಾರ ಸವಿದು ರಾತ್ರಿಯೆಲ್ಲ ಹರ ನಾಮಸ್ಮರಣೆ ಮಾಡುತ್ತಾ ಶಿವರಾತ್ರಿ ಆಚರಿಸುತ್ತಾರೆ.

ಮಂಗಾಡಳ್ಳಿ ಗ್ರಾಮದಲ್ಲಿ ಮಹಾಶಿವರಾತ್ರಿಯನ್ನು ಈ ರೀತಿ ವಿಭಿನ್ನವಾಗಿ ಆಚರಿಸುತ್ತಾರೆ. ಗ್ರಾಮದ ಚನ್ನಪ್ಪಾಜಿ ದೇವಸ್ಥಾನದ ಬಳಿ ಭಕ್ತರೆಲ್ಲರೂ ಸೇರಿ ಕುರಿ-ಕೋಳಿ ತಂದು ದೇವರಿಗೆ ಅರ್ಪಿಸಿ ಪ್ರಸಾದದ ರೀತಿ ಮಾಂಸಹಾರ ಅಡುಗೆ ಮಾಡ್ತಾರೆ. ಪ್ರಸಾದ ತಯಾರಾದ ನಂತರ ಮಾಂಸಾಹಾರವನ್ನು ದೇವರಿಗೆ ಎಡೆಯಿಟ್ಟು ನಂತರ ದೇವಸ್ಥಾನದ ಮುಂಭಾಗ ಎಲ್ಲರೂ ಸಾಮೂಹಿಕವಾಗಿ ಮಾಂಸಹಾರ ಸೇವಿಸ್ತಾರೆ. ಶತಮಾನಗಳಿಂದ ಈ ಆಚರಣೆಯನ್ನು ಗ್ರಾಮಸ್ಥರು ನಡೆಸಿಕೊಂಡು ಬಂದಿದ್ದಾರೆ ಎಂದು ಹೇಳಲಾಗ್ತಿದೆ.

Edited By : Nagesh Gaonkar
PublicNext

PublicNext

02/03/2022 11:28 am

Cinque Terre

34.79 K

Cinque Terre

0

ಸಂಬಂಧಿತ ಸುದ್ದಿ