ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: ಶ್ರೀ ವೇಣುಗೋಪಾಲ ಸ್ವಾಮಿ ರಥೋತ್ಸವ ವೈಭವ; ʼವಜ್ರಾಲಂಕಾರ ಶೋಭಿತ ವಿಶ್ವರಕ್ಷಕʼ

ದೇವನಹಳ್ಳಿ: ಬ್ರಿಟಿಷರ ವಶದಲ್ಲಿರೋ ಭಾರತದ ಕೋಹಿನೂರ್ ವಜ್ರಕ್ಕೆ ಬೆಲೆ ಕಟ್ಟಿಲ್ಲ. ಅದೇ ರೀತಿ ದೇವನಹಳ್ಳಿಯ ನೂರಾರು ವರ್ಷಗಳ ನೂರಾರು ಕೋಟಿ ಮೌಲ್ಯದ ವಜ್ರಾಭರಣಗಳಿಗೆ ಇದುವರೆಗೂ ಬೆಲೆ ಕಟ್ಟಲಾಗ್ತಿಲ್ಲ‌‌! ಇಂತಹ ಅತ್ಯಪರೂಪದ ಆಭರಣಗಳನ್ನು ದೇವರಿಗೆ 3 ಹಂತದಲ್ಲಿ ಸಿಂಗರಿಸಲಾಗ್ತದೆ. ಬೆಳ್ಳಿ, ಚಿನ್ನ, ವಜ್ರ ಖಚಿತ ಆಭರಣ ಅಲಂಕೃತ ಶ್ರೀ ವೇಣುಗೋಪಾಲ ಸ್ವಾಮಿ ರಥೋತ್ಸವ ಕಣ್ತುಂಬಿಕೊಳ್ಳುವುದೇ ಪರಮಾನಂದ.

ವಜ್ರಾಭರಣ ಜಾತ್ರೆ ಅಂದ್ರೆ ಮೊದಲಿಗೆ ನೆನಪಾಗೋದೆ ಮೇಲುಕೋಟೆ ಶ್ರೀ ಚೆಲುವರಾಯ ಸ್ವಾಮಿ ಜಾತ್ರೆ. ಇಂತಹದ್ದೇ ಒಂದು ಜಾತ್ರೆ ದೇವನಹಳ್ಳಿಲಿ ಜರುಗಿದೆ. ನೂರಾರು ಕೋಟಿ ಬೆಲೆಯ ಆಭರಣಗಳನ್ನು ಒಂದು ಸುತ್ತಿಗೆ ಬೆಳ್ಳಿ, ಬಂಗಾರ, ವಜ್ರಾಭರಣದಿಂದ ಅಲಂಕರಿಸಿ ದೇವರ ಮೆರವಣಿಗೆ ಮಾಡುತ್ತಿದ್ದರೆ ಉತ್ಸವ ವೀಕ್ಷಿಸಲು ಸಾವಿರಾರು ಭಕ್ತರು ನೆರೆದಿದ್ದರು.

ಪ್ರತಿವರ್ಷ ದೇವನಹಳ್ಳಿಯ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಮಾಘ ಮಾಸ ಮಖಾ ನಕ್ಷತ್ರದಲ್ಲಿ ರಥೋತ್ಸವ ನಡೆಯುತ್ತದೆ. ಬೆಳ್ಳಿ- ಬಂಗಾರದ ಕಿರೀಟ, ರತ್ನಖಚಿತ ವಜ್ರ ಕಿರೀಟ, ಕಂಠೀಹಾರ, ಕಮಲ ಹಾರ, ಮುತ್ತಿನ ಕಂಠಸರ, ಚಂದ್ರಹಾರ ಹೀಗೆ 21 ಬಗೆಯ ಆಭರಣಗಳಲ್ಲಿ 13 ಆಭರಣ ಮಾತ್ರ ಇಂದು ದೇವರಿಗೆ ಅಲಂಕರಿಸಲಾಗಿತ್ತು.

ನಾನಾ ರಾಜ ಮನೆತನ ಸಹಿತ ವಿಜಯನಗರ, ಕೆಂಪೇಗೌಡರ ವಂಶಸ್ಥ ರಣಭೈರೇಗೌಡ, ಮಲ್ಲಭೈರೇಗೌಡ, ದ್ಯಾವಣ್ಣಗೌಡ ಹಾಗೂ ಮೈಸೂರು ಅರಸರು ವಜ್ರ ವೈಢೂರ್ಯ ನೀಡಿದ್ದು, ಈ ಎಲ್ಲಾ ಆಭರಣ ರಥೋತ್ಸವದ ಆಕರ್ಷಣೆಯಾಗಿತ್ತು.

500 ವರ್ಷಗಳ ಇತಿಹಾಸದ ಶ್ರೀ ವೇಣುಗೋಪಾಲ ಸ್ವಾಮಿ ರಥೋತ್ಸವ ಪ್ರತಿವರ್ಷ ಹುಣ್ಣಿಮೆ ನಂತರದ ದಿನ ಜಾತ್ರೆ ನಡೆಯುತ್ತದೆ. ಅಂದು ತಾಲೂಕು ಟ್ರಜರಿಲಿ ಇರುವ ಆಭರಣ ಹಾಕಿ ಅದ್ಧೂರಿ ಜಾತ್ರೆ ಮಾಡುತ್ತಾ ಬರಲಾಗ್ತಿದೆ. ಕೊರೊನಾದಿಂದಾಗಿ 2 ವರ್ಷ ರದ್ದಾಗಿದ್ದ ಜಾತ್ರೆ ಈ ಭಾರಿ ವೈಭವದಿಂದ ನೆರವೇರಿದೆ.

SureshBabu PublicNext,

ದೇವನಹಳ್ಳಿ

Edited By : Manjunath H D
Kshetra Samachara

Kshetra Samachara

18/02/2022 01:57 pm

Cinque Terre

3.5 K

Cinque Terre

0