ಮಹಾದೇವಪುರ: ʼಮಕರ ಸಂಕ್ರಾಂತಿʼ ಪ್ರಯುಕ್ತ ಮಹದೇವಪುರ ಕ್ಷೇತ್ರದ ಆರ್ ಹೆಚ್ ಬಿ ಕಾಲೋನಿಯಲ್ಲಿ ನಗರ ಸಂಕೀರ್ತನೆ ಜರುಗಿತು. ಶ್ರೀರಾಮ-ಸೀತೆ, ಲಕ್ಷ್ಮಣ, ಹನುಮಂತರ ಭಾವಚಿತ್ರವನ್ನು ಹೊತ್ತು ಭಕ್ತಾದಿಗಳು ಭಜನೆ, ಭಕ್ತಿ ಗೀತೆಗಳನ್ನು ಹಾಡಿ ಕುಣಿಯುತ್ತಾ ಪ್ರಮುಖ ಬೀದಿಗಳಲ್ಲಿ ಸಾಗಿ ಸ್ಥಳೀಯರಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಿದರು.
ಮಹಾದೇವಪುರದ ಹೂಡಿಯಿಂದ ಅಯೋಧ್ಯೆಯವರೆಗೆ ಪಾದಯಾತ್ರೆ ಯಶಸ್ವಿಯಾಗಿ ಮಾಡಿದ ಶ್ರೀ ರಾಮಭಕ್ತ ಮಂಜುನಾಥ್ ಅವರು ಶ್ರೀರಾಮ ದೇವರ ಭಾವಚಿತ್ರವನ್ನು ಹೊತ್ತು ಭಾಗವಹಿಸಿದ್ದು ವಿಶೇಷವಾಗಿತ್ತು. ಕಸಾಪ ಮಹಾದೇವಪುರ ಕ್ಷೇತ್ರದ ಹಂಗಾಮಿ ಅಧ್ಯಕ್ಷ ಡಾ. ಅಜಿತ್ ಕುಮಾರ್, ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಹಗದೂರು ಶ್ರೀನಿವಾಸ, ಗಾಯಕರಾದ ನಾಗರಾಜ್ ಮತ್ತಿತರ ಗಣ್ಯರು ಭಾಗವಹಿಸಿದ್ದರು. ಈ ಸಂದರ್ಭ ಎಲ್ಲಾ ಸ್ಥಳೀಯ ನಾಗರಿಕರಿಗೆ ಎಳ್ಳುಬೆಲ್ಲ ವಿತರಿಸಲಾಯಿತು.
Kshetra Samachara
16/01/2022 11:09 am