ಬೆಂಗಳೂರು: ರಾಜ್ಯದ ವಿವಿಧೆಡೆ ಮಂಗಗಳ ಕಾಟದಿಂದ ಜನರು ಬೇಸೆತ್ತಿದ್ದಾರೆ. ವಿಶೇಷವಾಗಿ ಕೃಷಿಕರು ಮಂಗಗಳ ಹಾವಳಿಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ತೆಂಗಿನ ತೋಟ ಇರುವವರ ತೋಟಕ್ಕೆ ಮಂಗಗಳ ಹಿಂಡು ನುಗ್ಗಿದರೆ ತೆಂಗಿನ ಮರ ಸರಸರ ಹತ್ತಿ ಎರಡು ಕೈಯಲ್ಲಿ ಎರಡು ಎಳನೀರು ಎತ್ತಿಕೊಂಡು ಓಡಿ ಹೋಗುತ್ತವೆ. ಇದೇ ರೀತಿ ಬತ್ತ, ಕಾಫಿ, ಜೋಳ ಸೇರಿದಂತೆ ವಿವಿಧ ಕೃಷಿಗಳಿಗೆ ಮಂಗಗಳ ಹಾವಳಿ ಹೆಚ್ಚಿರುತ್ತವೆ. ತರಕಾರಿ ಬೆಳೆಗಾರರಂತೂ ಮಂಗಗಳ ಕಾಟದಿಂದ ಪಾರಾಗಲು ಸಾಕಷ್ಟು ಪ್ರಯತ್ನ ಪಡುತ್ತಾರೆ.
ಬೆಂಗಳೂರು ವ್ಯಾಪ್ತಿಯಲ್ಲಿಯೂ ಮಂಗಗಳ ಹಾವಳಿ ಅಲ್ಲಲ್ಲಿ ವರದಿಯಾಗುತ್ತದೆ. ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಂಗಗಳ ಹಾವಳಿ ಅತಿಯಾದರೆ ಸಾರ್ವಜನಿಕರು ಟೂಲ್ ಫ್ರಿ ಸಂಖ್ಯೆಯೊಂದಕ್ಕೆ ಕರೆ ಮಾಡಬಹುದಾಗಿದೆ. ಈ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸುತ್ತೋಲೆ ಹೊರಡಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಂಗಗಳ ಹಾವಳಿ ಮತ್ತು ಇತರೆ ವನ್ಯಜೀವಿಗಳಿಂದ ಆಗುವ ತೊಂದರೆಗಳಿಗೆ ಸಾರ್ವಜನಿಕರುಗಳು ಟೋಲ್ ಫ್ರೀ ಸಂ. 1533 ಕರೆ ಮಾಡಿ ದೂರುಗಳನ್ನು ನೀಡಬಹುದಾಗಿದೆ.
Kshetra Samachara
09/08/2022 09:00 pm