ರಾಜ್ಯ ಬಿಜೆಪಿ ಸರ್ಕಾರದ ಜನಸ್ಪಂದನ ಕಾರ್ಯಕ್ರಮಕ್ಕೆ ಶುಭ ಕೋರಿ ಅಂಬೇಡ್ಕರ್ ವೃತ್ತದ ನಾಮಫಲಕ ಕಾಣದಂತೆ ಫ್ಲೆಕ್ಸ್ ಅಳವಡಿಸಲಾಗಿತ್ತು. ಈ ಫ್ಲೆಕ್ಸ್ ಕಿತ್ತು ಹಾಕಿದ ದಲಿತ ಮುಖಂಡ ಗೂಳ್ಯ ಹನುಮಣ್ಣ, ಇದು ಅಂಬೇಡ್ಕರ್ ರವರಿಗೆ ಮಾಡಿದ ಅವಮಾನವೆಂದು ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡಬಳ್ಳಾಪುರ ತಾಲೂಕಿನ ತಮ್ಮಶೆಟ್ಟಿಹಳ್ಳಿ ಗ್ರಾಮದಲ್ಲಿ ರಾಜ್ಯ ಬಿಜೆಪಿ ಸರ್ಕಾರ "ಜನಸ್ಪಂದನ" ಆಯೋಜನೆ ಮಾಡಿದೆ. ಕಾರ್ಯಕ್ರಮಕ್ಕೆ ಶುಭ ಕೋರಿ ದಾರಿಯುದಕ್ಕೂ ಫ್ಲೆಕ್ಸ್ ಗಳ ಅಳವಡಿಕೆ ಮಾಡಲಾಗಿದೆ. ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ವೃತ್ತದ ನಾಮಫಲಕಕ್ಕೂ ಫ್ಲೆಕ್ಸ್ ಹಾಕಿ ನಾಮಫಲಕ ಕಾಣದಂತೆ ಮಾಡಲಾಗಿತ್ತು.
ಇದರಿಂದ ಆಕ್ರೋಶಗೊಂಡ ದಲಿತ ಮುಖಂಡ ಗೂಳ್ಯ ಹನುಮಣ್ಣ, ಆ ಫ್ಲೆಕ್ಸ್ ಕಿತ್ತು ಹಾಕಿ ನಾಮಫಲಕ ವಾಹನ ಸವಾರರಿಗೆ ಕಾಣುವಂತೆ ಮಾಡಿದರು. ಪ್ರವಾಸಿ ಮಂದಿರದ ವೃತ್ತದಿಂದ ತಾಲೂಕು ಕಚೇರಿ ವೃತ್ತದವರೆಗೂ ಅಂಬೇಡ್ಕರ್ ರಸ್ತೆ ಇದ್ದು, ಪ್ರವಾಸಿ ಮಂದಿರ ವೃತ್ತಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಿ ನಾಮಫಲಕ ಹಾಕಲಾಗಿದೆ.
PublicNext
10/09/2022 02:45 pm