ದೊಡ್ಡಬಳ್ಳಾಪುರ: ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿಬ್ಬಾಣ ಅಂಗವಾಗಿ ಮೌಢ್ಯ ಕಂದಾಚಾರ ವಿರೋಧಿ ದಿನವನ್ನಾಗಿ ಸ್ಮಶಾನದಲ್ಲಿ ಆಚರಿಸಲಾಯಿತು. ಸ್ಮಶಾನದಲ್ಲಿಯೇ ಬಾಡೂಟ ಸವಿದು, ಸ್ಮಶಾನ ಕೆಡಕನ್ನು ಉಂಟು ಮಾಡದ ಸ್ಥಳವೆಂಬ ಸಂದೇಶವನ್ನೂ ಸಾರಲಾಯಿತು.
ದೊಡ್ಡಬಳ್ಳಾಪುರ ತಾಲೂಕಿನ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ನಗರದ ರೋಜಿಪುರದ ಸಾರ್ವಜನಿಕ ಸ್ಮಶಾನದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಚಿಂತಕ ಯೋಗೇಶ್ ಮಾಸ್ಟರ್ , ಪತ್ರಕರ್ತ ವೆಂಕಟೇಶ್ ಮುಖ್ಯ ಅತಿಥಿಯಾಗಿದ್ದರು. ದೆವ್ವಗಳ ಪ್ರಭಾವಕ್ಕೆ ಒಳಗಾಗುತ್ತೇವೆ ಎಂಬ ಕಾರಣಕ್ಕೆ ಜನರು ಸ್ಮಶಾನಕ್ಕೆ ಹೋಗುವುದಕ್ಕೆ ಹೆದರುತ್ತಾರೆ. ಜನರ ಮೂಢ ನಂಬಿಕೆ ದೂರ ಮಾಡಲು ಸ್ಮಶಾನದಲ್ಲಿಯೇ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮೊಟ್ಟೆ ಬಗ್ಗೆ ಚರ್ಚೆಯೇ ನಾನ್ ಸೆನ್ಸ್ : ಶಾಲಾ ಮಕ್ಕಳಿಗೆ ಊಟದ ಸಮಯದಲ್ಲಿ ಮೊಟ್ಟೆ ಕೊಡುವ ವಿಚಾರಕ್ಕೆ ಸಂಬಂಧಿಸಿ ಪರ- ವಿರೋಧ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯೋಗೇಶ್ ಮಾಸ್ಟರ್, ಮಕ್ಕಳಿಗೆ ಮೊಟ್ಟೆ ಕೊಡುವುದನ್ನು ವಿರೋಧಿಸುವುದು ಅವರ ಭೌತಿಕ ದಾರಿದ್ರ್ಯ ತೋರಿಸುತ್ತಿದೆ. ಮೊಟ್ಟೆ ವಿಚಾರದಲ್ಲಿ ಧರ್ಮ- ಜಾತಿ, ಸಂಸ್ಕೃತಿ ಎಳೆದು ತರಲಾಗುತ್ತಿದೆ. ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಮೊಟ್ಟೆ ವಿಚಾರ ಚರ್ಚೆ ಅನವಶ್ಯಕ. ಪೌಷ್ಠಿಕಾಂಶಯುಕ್ತ ಮೊಟ್ಟೆಯನ್ನು ಮಕ್ಕಳಿಗೆ ಕೊಡಬೇಕು. ತಿನ್ನೋರು ತಿನ್ನಲಿ, ಬೇಡ ಎಂದವರಿಗೆ ಬೇಡ ಎಂದರು.
Kshetra Samachara
06/12/2021 06:16 pm