ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಬಿಎಂಪಿ ಪರಿಷ್ಕೃತ ಮತದಾರರ ಕರಡು ಪ್ರತಿ ಪ್ರಕಟ; ಪರಿಶೀಲನೆ ಅವಕಾಶ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2022ರ ಕಾರ್ಯ ಚಟುವಟಿಕೆಗಳ ಭಾಗವಾಗಿ ಇಂದು ಪರಿಷ್ಕೃತ ಮತದಾರರ ಕರಡು ಪ್ರತಿಯನ್ನು ಪಾಲಿಕೆಯ ಎಲ್ಲ 28 ವಿಧಾನಸಭೆ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ ಹಾಗೂ ವಾರ್ಡ್ ಕಚೇರಿಗಳಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಗೆ ಮತದಾರರ ಪಟ್ಟಿಯನ್ನು ಪರಿಶೀ ಲಿಸಿಕೊಳ್ಳಲು ಅವಕಾಶ ಕಲ್ಪಿ ಸಲಾಗಿದೆ.

ಈ ಬಗ್ಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸಿರುವ ಕುರಿತು ರಾಜಕೀಯ ಪಕ್ಷಗಳೊಂದಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ನೇತೃತ್ವದಲ್ಲಿ ಸಭೆ ನಡೆಯಿತು.

08-11-2021ರಂದು(ಇಂದಿನಿಂದ) ಪರಿಷ್ಕೃತ ಮತದಾರರ ಕರಡು ಪ್ರತಿ ಪ್ರಕಟಿಸಲಾಗಿದ್ದು, ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದಲ್ಲಿ, ತಪ್ಪಾಗಿದ್ದಲ್ಲಿ, ತಪ್ಪಾಗಿ ಸೇರ್ಪಡೆಗೊಂಡಿದ್ದಲ್ಲಿ ಹಾಗೂ ಒಂದು ಭಾಗ ಸಂಖ್ಯೆಯಿಂದ ಮತ್ತೊಂದು ಭಾಗದ ಸಂಖ್ಯೆಗೆ ವರ್ಗಾವಣೆಯಾಗಬೇಕಿದ್ದಲ್ಲಿ ಮತ್ತು ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಮತದಾರರು, ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ನೋಂದಣಾಧಿಕಾರಿಗಳ ಕಚೇರಿ, ವಾರ್ಡ್ ಕಚೇರಿ ಹಾಗೂ ಬಿ.ಎಲ್.ಒ. ಅವರಿಗೆ ನಮೂನೆ-6, 7, 8 ಮತ್ತು 8ಎ ರಲ್ಲಿ ತಮ್ಮ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 8ರ ವರೆಗೆ ಚುನಾವಣಾ ಅಯೋಗ ಅವಕಾಶ ನೀಡಿದೆ.

ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು www.ceokarnataka.kar.nic.in website ಮತ್ತು ಬಿಬಿಎಂಪಿ www.bbmp.gov.in website ನಲ್ಲಿ ಪರಿಶೀಲಿಸುವ ಮೂಲಕ ಖಾತರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು/ಮತದಾರರು ತಮ್ಮ ಮೊಬೈಲ್‌ನಲ್ಲಿ VHA(Voter Helpline App) ಆ್ಯಪ್ ಅಥವಾ NVSP (National Voters Service Portal) website ಮೂಲಕ ಖುದ್ದಾಗಿ ಮತದಾರರ ಮಾಹಿತಿ ಖಾತರಿ ಪಡಿಸಿಕೊಳ್ಳಬಹುದು. e-EPIC Download ಮಾಡಿಕೊಳ್ಳಬಹುದು ಹಾಗೂ ಇನ್ನಿತರ ಮಾಹಿತಿಗಳಾದ ಮತಗಟ್ಟೆ, ಶೇಕಡಾವಾರು ಮತದಾನದ ಮಾಹಿತಿ ಪಡೆದುಕೊಳ್ಳಬಹುದು.

ಮತದಾರರ ವಿವರ: ಪುರುಷ ಮತದಾರರ ಸಂಖ್ಯೆ:

4909042, ಮಹಿಳಾ ಮತದಾರರ ಸಂಖ್ಯೆ: 4528728,

ಇತರೆ(ತೃತೀಯ ಲಿಂಗ) ಮತದಾರರ ಸಂಖ್ಯೆ: 1646.

ಒಟ್ಟು: 9439416.

Edited By : Nirmala Aralikatti
Kshetra Samachara

Kshetra Samachara

08/11/2021 06:11 pm

Cinque Terre

258

Cinque Terre

0

ಸಂಬಂಧಿತ ಸುದ್ದಿ