ವರದಿ: ಬಲರಾಮ್ ವಿ.
ಬೆಂಗಳೂರು: ಕೆಆರ್ ಪುರದ ರಾಮಮೂರ್ತಿ ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿಕ್ಕಣ್ಣ ಮತ್ತು ರಾಮಕ್ಕ ಸೇವಾ ಸಂಸ್ಥೆ ಹಾಗೂ ರಾಮಮೂರ್ತಿ ನಗರದ ಕ್ರೀಡಾ ಮಂಡಳಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಹಳ್ಳಿ ಹಬ್ಬವನ್ನು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಇಂದು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಚಿವರು, ರಾಮಮೂರ್ತಿ ನಗರ ವಾರ್ಡ್ ನ ಹಳ್ಳಿ ಹಬ್ಬದಲ್ಲಿ ಮಹಿಳಾ ಮತ್ತು ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಿರುವುದು ಖುಷಿಯ ವಿಚಾರ. ಕ್ಷೇತ್ರದ ಅಲ್ಲಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಳ್ಳಿ ಹಬ್ಬ ಜರುಗಲಿ. ಹಬ್ಬದಿಂದ ಒಗ್ಗಟ್ಟು, ಸೌಹಾರ್ದತೆ ವೃದ್ಧಿ ಜತೆಗೆ ಪರಸ್ಪರ ಅರಿವಿಗೆ ಸಹಕಾರಿ ಎಂದರು.
ಈ ಸಂದರ್ಭ ಸ್ಥಳೀಯರು, ಬಾಸ್ಕೆಟ್ ಬಾಲ್ ಸ್ಟೇಡಿಯಂ ಹಾಗೂ ಶೌಚಾಲಯ ನಿರ್ಮಾಣದ ಬೇಡಿಕೆಯಿಟ್ಟಿದ್ದು, ಆದಷ್ಟೂ ಬೇಗ ಯೋಜನೆ ರೂಪಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಹಾಗೆಯೇ ರಾಮಮೂರ್ತಿ ನಗರದ ಆಟದ ಮೈದಾನವನ್ನು ಉದ್ಘಾಟಿಸಿದರು. ನೂರಾರು ಜನರು ಹಳ್ಳಿ ಹಬ್ಬದಲ್ಲಿ ಭಾಗವಹಿಸಿದ್ದರು. ಮುಖಂಡರಾದ ಬಾಕ್ಸರ್ ನಾಗರಾಜ್, ಭೀರಪ್ಪ ಮತ್ತಿತರರು ಉಪಸ್ಥಿತರಿದ್ದರು.
PublicNext
26/06/2022 05:53 pm