ಬೆಂಗಳೂರು: ಚಾಮರಾಜಪೇಟೆ ಮೈದಾನ ವಿಚಾರವಾಗಿ ಇದುವರೆಗೂ ಕಾಂಗ್ರೆಸ್, ಅಲ್ಪಸಂಖ್ಯಾತರ ಓಲೈಕೆ ಮಾಡಿಕೊಂಡು, ಹಿಂದೂಗಳ ವಿರೋಧ ಕಟ್ಟಿಕೊಂಡೇ ಬರ್ತಿದೆ. ಚಾಮರಾಜಪೇಟೆ ಮೈದಾನ ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಜಾಗ ಎಂದು BDA ಅಧ್ಯಕ್ಷ ವಿಶ್ವನಾಥ್ ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆ ಮೈದಾನದ ಪರವಾಗಿ ಕಾಂಗ್ರೆಸ್ ಪಕ್ಷ ಇದೆ. ಅದು ಸರ್ಕಾರಿ ಜಾಗ, ಎಲ್ಲರಿಗೂ ಸೇರಬೇಕು ಅನ್ನೋದು ಬಿಜೆಪಿ ವಾದ. ತ್ರಿವರ್ಣ ಧ್ವಜ ಅಂದ್ರೆ ನಮಗೆ ಕೇಸರಿ, ಬಿಳಿ, ಹಸಿರು ಅಂತ ಹೇಳಿಕೊಟ್ಟಿದ್ದಾರೆ. ಆದ್ರೆ ಕೆಲವರು ಕೆಂಪು ಅಂತಾರೆ ಅಂತ ಪರೋಕ್ಷವಾಗಿ ಸಿದ್ದರಾಮಯ್ಯನಿಗೆ ಮಾತಿನಲ್ಲೇ ವಿಶ್ವನಾಥ್ ತಿವಿದರು.
ಇನ್ನು ಕಾಂಗ್ರೆಸ್ ನವರಿಗೆ ಕೇಸರಿ ಕಂಡ್ರೆ ಆಗಲ್ಲ. ಈದ್ಗಾ ಯಾವಾಗ್ಲೋ ಕಟ್ಟಿಕೊಂಡಿದ್ದಾರೆ. ಅದಕ್ಕೆ ಹಕ್ಕು ಸಾಧಿಸಲು ಆಗಲ್ಲ. ದಾಖಲೆ ಕೊಡುವಂತೆ ಸಮಯ ಕೊಟ್ಟಿದ್ರೂ, ಅವರು ದಾಖಲೆ ಕೊಟ್ಟಿಲ್ಲ. ಆದ್ದರಿಂದ ಅದು ಕಂದಾಯ ಆಸ್ತಿ, ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ, ಚಾಮುಂಡಿ ಉತ್ಸವ, ಅಣ್ಣಮ್ಮನ ಉತ್ಸವಾನು ಮಾಡ್ತೇವೆ ಎಂದರು..
PublicNext
12/08/2022 09:28 pm