ಬೆಂಗಳೂರು: ಇತ್ತೀಚೆಗೆ ರಾಜ್ಯ ಮತ್ತು ಭಾರತದಲ್ಲಿ ಕೊಲೆಗಾಗಿ ಕೊಲೆ ದ್ವೇಷಕ್ಕಾಗಿ ಮನುಷ್ಯ ನೀಚ ಮಟ್ಟಕ್ಕಿಳಿದಿದ್ದಾನೆ. ಪಕ್ಷ ಮತ್ತು ಸರ್ಕಾರ ದ್ವೇಷ ಸಾಧನೆಗಾಗಿ ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಇದರ ವಿರುದ್ಧ, ಶೋಷಣೆಯ ವಿರುದ್ಧ, ದೀನದಲಿತರ ಪರವಾಗಿ, ಶೋಷಿತರ ಧ್ವನಿಯಾಗಲು ದಲಿತ ಸಂಘರ್ಷ ಸಮಿತಿ ಮುಂದಾಗಿದೆ.
ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದರೂ, ಸಂವಿಧಾನ ಬದ್ದ ಹಕ್ಕು ಅನುಷ್ಠಾನ ಆಗಿಲ್ಲ. ಶೋಷಿತರ ಮೇಲಿನ ದೌರ್ಜನ್ಯ ಕಡಿಮೆ ಆಗ್ತಿಲ್ಲ. ಆಡಳಿತಾರೂಢ ಸರ್ಕಾರ ಜನರ ಜೀವನಾವಶ್ಯ ವಸ್ತುಗಳ ಬೆಲೆ ಗಗನಕ್ಕೇರಿದರು ಕಡಿಮೆ ಮಾಡ್ತಿಲ್ಲ. ಭಾಷೆ , ಗಡಿ, ಗುಡಿ, ಜಾತಿ ಧರ್ಮದ ಹೆಸರಿನಲ್ಲಿ ವಿವಾದ ಸೃಷ್ಟಿಸಿ ರಾಷ್ಟ್ರೀಯ ಸಮಗ್ರತೆ ಮತ್ತು ಭದ್ರತೆಗೆ ಧಕ್ಕೆಯಾಗುತ್ತಿವೆ.
ಆದ್ದರಿಂದ ಸಂವಿಧಾನದ ರಕ್ಷಣೆಗಾಗಿ 2022 ಆಗಷ್ಟ್ 12ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ರಾಜ್ಯಮಟ್ಟದ ಶೋಷಿತರ ಐಕ್ಯತಾ ಸಮಾವೇಶ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಗತಿಪರ ಹೋರಾಟಗಾರರು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಅಂಬೇಡ್ಕರ್ ಮೊಮ್ಮಗಳು ರಮಾಭಾಯಿ, ಡಾ.ಆನಂದ್ ತೇಲ್ತುಂಬ್ಡೆ ಸೇರಿದಂತೆ ಸಾವಿರಾರು ಜನ ಭಾಗವಹಿಸಲಿದ್ದಾರೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ..
PublicNext
11/08/2022 10:37 pm