ಆನೇಕಲ್:ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ಇದೇ ತಿಂಗಳು 14 ನೇ ತಾರೀಖಿನಂದು ಮಾಯಸಂದ್ರ ಕರಗ ಮಹೋತ್ಸವ ನಡೆಯಿತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ನಟ ನಿಖಿಲ್ ಕುಮಾರಸ್ವಾಮಿ ಅವರನ್ನು ಆಹ್ವಾನ ಮಾಡಲಾಗಿತ್ತು.
ಈ ವೇಳೆ ಚಿತ್ರ ನಟ ನಿಖಿಲ್ ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ ಪೂಜೆಗೆ ಅಂತ ತೆರಳಿದ್ದರು. ಆ ವೇಳೆ ನಿಖಿಲ್ ಕುಮಾರ್ ಸ್ವಾಮಿಯವರು ಒಳಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇಲ್ಲ ಸರ್ ಅಲ್ಲಿಗೆ ಹೋಗುವ ಹಾಗಿಲ್ಲ! ದೇವಸ್ಥಾನದ ಬಾಗಿಲಲ್ಲಿಯೇ ನಿಲ್ಲಿಸಿದ್ದಾರೆ. ಅಲ್ಲಿಂದಲೇ ಪೂಜೆ ಮಾಡಿಸಿ ವಾಪಸ್ಸು ಕಳಿಸಿದ್ದಾರೆ. ದೇವಸ್ಥಾನದ ಹೊಸ್ತಿಲಲ್ಲಿ ನಿಂತು ನಿಖಿಲ್ ದೇವರಿಗೆ ಹಣ ಹಾಕಿ ವಾಪಸಾಗಿದ್ದಾರೆ.
ಇಲ್ಲಿನ ಸ್ಥಳೀಯರ ಮಾಹಿತಿಯಂತೆ, ವಹ್ನ ಕುಲ ಸಮುದಾಯದ ಜನರನ್ನ ಬಿಟ್ಟು, ಬೇರೆ ಯಾವ ಜಾತಿಯ ಜನರು ಬಂದ್ರೂ ಸರಿಯೇ. ಅವರಿಗೆ ಇಲ್ಲಿ ಪ್ರವೇಶ ನಿರ್ಬಂಧ ಇದೆ.
ಈ ಹಿಂದೆ ಸಹ ಮಾಜಿ ಸಚಿವ ರಾಮಲಿಂಗಾರೆಡ್ಡಿ ಈ ಸಮಸ್ಯೆ ಎದುರಿಸಿದ್ದಾರೆ ಎಂದು ಸ್ಥಳೀಯ ಹಿರಿಯ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನ ನೋಡಿದ್ರೆ, ಎಲ್ಲೋ ಒಂದು ಕಡೆ ಇನ್ನೂ ಜಾತಿ-ಬೇಧ ಭಾವ ತಾಂಡವಾಡುತ್ತಿದೆ ಅನ್ನೋ ಪ್ರಶ್ನೆ ಕಾಡುತ್ತಿದೆ.
PublicNext
20/04/2022 07:46 pm