ಬೆಂಗಳೂರು: ರಾಜಧಾನಿಯಲ್ಲಿರುವ ಬಹುತೇಕ ಮಸೀದಿಗಳಲ್ಲಿ ನಿಷೇಧಿತ ಅವಧಿಯಲ್ಲಿ ಮೈಕ್ ಬಳಸಿ ಶಬ್ಧ ಮಾಲಿನ್ಯವಾಗುತ್ತಿದೆ. ಇದರಿಂದ ಹಿರಿಯ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಶಾಂತ್ ಸಂಬರಗಿ ನೇತೃತ್ವದ ನಿಯೋಗ ಪೊಲೀಸ್ ಕಮಿಷನರ್ ಕಮಲ್ ಪಂತ್ ಗೆ ದೂರು ನೀಡಿದೆ.
ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪ್ರಶಾಂತ್ ಸಂಬರಗಿ, ಶಬ್ಧ ಮಾಲಿನ್ಯ ಆರೋಗ್ಯಕ್ಕೆ ಮಾರಕವಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗೈಡ್ ಲೈನ್ಸ್ ಹಾಗೂ ಹೈಕೋರ್ಟ್ ಆದೇಶವಿದ್ದರೂ ಮಸೀದಿ ಸಹಿತ ಇನ್ನಿತರ ಧಾರ್ಮಿಕ ಕೇಂದ್ರಗಳಲ್ಲಿ ಶಬ್ಧ ಮಾಲಿನ್ಯವಾಗುತ್ತಿದೆ. ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಆಂಪ್ಲಿಫೈಡ್ ಬಳಸಿ ಸೌಂಡ್ ಮಾಡಬಾರದು ಅಂತ ದೇಶದ ನಾನಾ ಕೋರ್ಟ್ ಗಳೂ ಆದೇಶಿಸಿವೆ.
ನಗರದ ಬಹುತೇಕ ಮಸೀದಿಗಳಲ್ಲಿ ಮೈಕ್ ಇಟ್ಟು ಅಜಾನ್ ಮಾಡ್ತಿದ್ದಾರೆ. ಮುಂಜಾನೆ 5ಕ್ಕೇ ಅಜಾನ್ ಕೂಗ್ತಿದ್ದಾರೆ. ಈ ನಿಟ್ಟಿನಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗೈಡ್ ಲೈನ್ಸ್ ಜಾರಿ ಮಾಡಲು ಕಮಿಷನರ್ ಗೆ ದೂರು ನೀಡಿದ್ದೇವೆ. ಈ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಕಮಿಷನರ್ ಭರವಸೆ ನೀಡಿದ್ದಾರೆ ಎಂದರು.
ಅಜಾನ್ ಪರವಾಗಿ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನಿರ್ದೇಶನ ಪಾಲಿಸುವುದು ಬೇಡ್ವಾ ಇವರಿಗೆ? ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಹೇಳುತ್ತಾರೆ ʼನಾನು ಅಜಾನ್ ಕೇಳಿ ಬೆಳೆದಿದ್ದೇನೆ ಅಂತಾ. ಇದು ಖಂಡಿತಾ ಸುಳ್ಳು. ಅವರು ಬದುಕ್ತಿರೋದು 65 ಎಕರೆ ಪ್ರದೇಶದಲ್ಲಿರುವ ಮನೆಯಲ್ಲಿ! ಅವರಿಗೆ ಅಲ್ಲಿ ಅಜಾನ್ ಕೇಳಿಸೋದಿಲ್ಲʼ ಅಂತಾ ಟಾಂಗ್ ನೀಡಿದರು.
PublicNext
06/04/2022 07:54 am