ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೋದಿಗೆ ಜೈಕಾರ ಹಾಕಿ ಜಿಲ್ಲಾ ಕೇಂದ್ರಕ್ಕೆ ಒತ್ತಾಯಿಸಿದ ಪ್ರತಿಭಟನಾಕಾರರ ಬಂಧನ

ದೊಡ್ಡಬಳ್ಳಾಪುರ: ಜಿಲ್ಲಾ ಕೇಂದ್ರಕ್ಕಾಗಿ ದೊಡ್ಡಬಳ್ಳಾಪುರ ಜನರು ಹೋರಾಟದ ಹಾದಿ ತುಳಿದಿದ್ದಾರೆ, ಕನ್ನಡ ಪರ ಸಂಘಟನೆಗಳ ಸದಸ್ಯರು ಮೋದಿಗೆ ಜೈಕಾರ ಹಾಕುತ್ತಲೇ ಜಿಲ್ಲಾ ಕೇಂದ್ರವನ್ನಾಗಿ ಒತ್ತಾಯಿಸಿ ವೇದಿಕೆಯತ್ತ ತೆರಳುತ್ತಿದ್ದ ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವನ್ನಾಗಿ ದೊಡ್ಡಬಳ್ಳಾಪುರ ನಗರವನ್ನ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಕಾರ್ಯಕರ್ತರು ಹೋರಾಟಕ್ಕೆ ಧುಮುಕಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ಜನಸ್ಪಂದನ ಕಾರ್ಯಕ್ರಮದ ವಿರುದ್ಧವಾಗಿ ಕರಾಳೋತ್ಸವ ಆಚರಣೆಗೆ ಕರೆ ಸಹ ನೀಡಲಾಗಿದೆ, ಕರಾಳೋತ್ಸವದ ಅಂಗವಾಗಿ ಜಾಥಾ ಹೋರಾಟ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಪೊಲೀಸರು ಕ್ರಮದಿಂದ ಎಚ್ಚೆತ್ತ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮೋದಿಗೆ ಜೈಕಾರ ಹಾಕುವುದರ ಜೊತೆಗೆ ಜಿಲ್ಲಾ ಕೇಂದ್ರದ ಘೋಷಣೆ ಹಾಕುತ್ತಾ ವೇದಿಕೆ ಕಾರ್ಯಕ್ರಮದತ್ತ ತೆರಳಲು ಮುಂದಾದರು, ತಕ್ಷಣವೇ ಪೊಲೀಸರು ದೊಡ್ಡಬಳ್ಳಾಪುರ ನಗರಸಭೆ ಮುಂಭಾಗ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ನೆಲಮಂಗಲಕ್ಕೆ ಕಳಿಸಿದರು.

Edited By :
PublicNext

PublicNext

10/09/2022 02:23 pm

Cinque Terre

27.31 K

Cinque Terre

0

ಸಂಬಂಧಿತ ಸುದ್ದಿ