ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಎಸ್ ಐ ಅಕ್ರಮ ಪ್ರಕರಣ ಪ್ರಿಯಾಂಕ ಖರ್ಗೆಗೆ ಎರಡನೇ ಬಾರಿ ನೋಟಿಸ್ ಜಾರಿ

ಬೆಂಗಳೂರು: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಎರಡನೇ ಬಾರಿ ಸಿಐಡಿ ಪೊಲೀಸರು ಶಾಸಕ ಪ್ರಿಯಾಂಕ ಖರ್ಗೆಗೆ ನೋಟಿಸ್ ಜಾರಿ ಮಾಡಿದ್ದಾರೆ. ಪಿಎಸ್ ಐ ಹಗರಣ ಸಂಬಂಧ ಕಳೆದ ತಿಂಗಳು ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋ ಕ್ಲಿಪ್ ಗಳನ್ನು ಹರಿಬಿಟ್ಟಿದ್ದರು. ಈ ಸಂಬಂಧ ಸಿಐಡಿ ತಮ್ಮ ಬಳಿಯಿರುವ ಮಾಹಿತಿಗಳನ್ನು ನೀಡುವಂತೆ ಕೋರಿ ಏ. 25 ರಂದು ಹಾಜರಾಗಲು ನೋಟಿಸ್ ಜಾರಿ ಮಾಡಿತ್ತು.

ಆದರೆ ಖರ್ಗೆ ಸಿಐಡಿ ವಿಚಾರಣೆಗೆ ಹಾಜರಾಗಿರಲಿಲ್ಲ. ಏ.28ರಂದು ಸಿಐಡಿಗೆ ನೀಡಿದ ನೋಟಿಸ್ ಗೆ ಉತ್ತರಿಸಿದ್ದರು. ಪರಿಶೀಲನೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕವಾದ ಮಾಹಿತಿ ಇರಲಿಲ್ಲ.ಅಲ್ಲದೆ ಉತ್ತರಿಸಿದ ಪತ್ರದಲ್ಲಿ ನನ್ನ ಬಳಿ ಇನ್ನೂ ಸಾಕ್ಷ್ಯಾಧಾರಗಳಿವೆ ಎಂದು ಶಾಸಕರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಸಿಐಡಿ ನೋಟಿಸ್ ನೀಡಿದ್ದು ನೋಟಿಸ್ ತಲುಪಿದ ಎರಡು ದಿನದ ಒಳಗಾಗಿ ವಿಚಾರಣೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

Edited By : Nirmala Aralikatti
PublicNext

PublicNext

04/05/2022 08:36 pm

Cinque Terre

16.41 K

Cinque Terre

1

ಸಂಬಂಧಿತ ಸುದ್ದಿ