ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು ಶಾಂತಿ ಸುವ್ಯವಸ್ಥೆಗೆ ಭಂಗ ತರುವಂತಹವರ ವಿರುದ್ಧ ಹಿಂದೆಯೂ ಕ್ರಮ ಕೈಗೊಂಡಿದ್ದೇವೆ, ಮುಂದೆಯೂ ಕ್ರಮ ಕೈಗೊಳ್ಳುತ್ತೇವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.
ನಗರ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಜಿ ಪ್ರವೀಣ್ ಸೂದ್ ಪ್ರತಿ ಜಿಲ್ಲೆಗೆ ಭೇಟಿ ನೀಡಿ ಪೊಲೀಸರ ಅಹವಾಲನ್ನ ಕೇಳುತ್ತೇನೆ. ಅದೇ ರೀತಿ ಬೆಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿ ಚರ್ಚಿಸಿದ್ದೇವೆ.
ಪೊಲೀಸರ ಅಹವಾಲುಗಳು, ಕುಂದು ಕೊರತೆಗಳು, ಅಗತ್ಯತೆಗಳ ಬಗ್ಗೆ ಚರ್ಚಿಸಲಾಗಿದೆ ಎಂದರು.
ಕೋಮು ಸೌಹಾರ್ದತೆ ಕದಡುವಂತಹ ಪ್ರಕರಣಗಳು ಹೆಚ್ಚುತ್ತಿರುವ ವಿಚಾರ ಸಂಬಂಧ ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಶಾಂತಿ ಸುವ್ಯವಸ್ಥೆ ಭಂಗ ತರುವಂತಹವರ ವಿರುದ್ಧ ಹಿಂದೆಯೂ ಕ್ರಮ ಕೈಗೊಂಡಿದ್ದೇವೆ, ಮುಂದೆಯೂ ಕೈಗೊಳ್ಳುತ್ತೇವೆ ಎಂದರು.
ಹಿಜಾಬ್ ವಿವಾದದ ಕುರಿತಾದ ಅಲ್ ಖೈದಾ ನಾಯಕನ ವಿಡಿಯೋ ಗೆ ಪ್ರತಿಕ್ರಿಯಿಸಿದ ಡಿಜಿ ಪ್ರತಿ ವಿಚಾರಗಳ ಬಗ್ಗೆಯೂ ನಾವು ಗಮನಿಸುತ್ತಿರುತ್ತೇವೆ. ತನಿಖೆ ಮಾಡುತ್ತೇವೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಎಲ್ಲಾ ಸೂಕ್ಷ್ಮ ವಿಚಾರಗಳ ಬಗ್ಗೆ ನಮ್ಮದೇ ಆಯಾಮದಲ್ಲಿ ತನಿಖೆ ನಡೆಸುತ್ತೇವೆ.. ಈ ಬಗ್ಗೆ ಇಲ್ಲಿ ಮಾತನಾಡುವುದು ಸೂಕ್ತವಲ್ಲ ಎಂದರು.
PublicNext
06/04/2022 10:24 pm