ಬೆಂಗಳೂರು: ಹಿಜಾಬ್, ಹಲಾಲ್ ಬಳಿಕ ಇದೀಗ ಮೈಕ್ ನಿಷೇಧದ ಕೂಗು ರಾಜ್ಯದಲ್ಲಿ ಹೆಚ್ಚಾಗಿದೆ. ಮಸೀದಿಯಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸುವಂತೆ ಹಿಂದೂ ಪರ ಸಂಘಟನೆಗಳು ಒತ್ತಾಯಿಸಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಜಮೀಯಾ ಉಲ್ ಉಲೂಮ್ ಅರೇಬಿಕ್ ಕಾಲೇಜು ಪ್ರಾಚಾರ್ಯ ಮಹಮ್ಮದ ಮಕ್ಸೂದ್ ಇಮ್ರಾನ್ ಮಾತನಾಡಿ ನಾವು ಯಾವುದೇ ಕಾರಣಕ್ಕೂ ಮೈಕ್ ತೆಗೆಯಲ್ಲಾ ಎಂದಿದ್ದಾರೆ.
ಯಾವ ಸ್ಥಳದಲ್ಲಿ ಎಷ್ಟರ ಮಟ್ಟಿಗೆ ಸ್ಪೀಕರ್ ಹಾಕಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಅದೇ ರೀತಿಯಲ್ಲಿ ನಾವು ಮೈಕ್ ಗಳ ಸೌಂಡ್ ಫೀಕ್ಸ್ ಮಾಡಲೆಂದೇ ಡಿವೈಸ್ ವೊಂದನ್ನು ಪರಿಚಯಿಸಿದ್ದೇವೆ.
ಈ ಸೌಂಡ್ ಕಂಟ್ರೋಲರ್ ಡಿವೈಸ್ ಯಾವ ಸ್ಥಳದಲ್ಲಿ ಎಷ್ಟರ ಮಟ್ಟಿಗೆ ಸೌಂಡ್ ಇರಬೇಕು ಎಂದು ಇದರಲ್ಲಿ ಫೀಕ್ಸ್ ಮಾಡಿ ಸ್ಪಿಕರ್ ಗೆ ಅವಳಡಿಸಿದರೆ ಅದು ಆಯಾ ಏರಿಯಾಗೆ ಅನುಗುಣವಾಗಿ ಸೌಂಡ್ ಹೊರಹೊಮ್ಮುವಂತೆ ನೋಡಿಕೊಳ್ಳುತ್ತದೆ ಎಂದಿದ್ದಾರೆ.
ಯಾರೋ ಹೇಳುತ್ತಾರೆಂದು ನಾವು ಮೈಕ್ ಬಿಚ್ಚಲ್ಲಾ ಹೆಚ್ಚಾಗಿ ಈ ಸ್ಪೀಕರ್ ತೆರವು ಕೇವಲ ಮಸೀದಿಗೆ ಮಾತ್ರ ಅಲ್ಲ, ಮದೀರ, ಚರ್ಚ್,ಗುರುದ್ವಾರಕ್ಕೂ ಅನ್ವಯವಾಗುತ್ತದೆ. ಕೇವಲ ಮಸೀದಿ ಮೈಕ್ ಬ್ಯಾನ್ ಮಾಡಿ ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ ಎಂದಿದ್ದಾರೆ.
ಇನ್ನು ಮೈದಾನಗಳಲ್ಲಿ ನಾವು ಪ್ರಾರ್ಥನೆ ಮಾಡುವಾಗ ಆಯಾ ಸ್ಥಳದ ಪೊಲೀಸರ ಅನುಮತಿ ಪಡೆದು ಸಾಮೂಹಿಕ ಪ್ರಾರ್ಥನೆ ಮಾಡಬೇಕು ಅದೇ ರೀತಿ ಮಾಡುತ್ತಾ ಇದ್ದೇವೆ. ಇತ್ತಿಚೆಗೆ ಬೆಂಗಳೂರಿನಲ್ಲಿ ಮಸೀದಿಯಲ್ಲಿಯ ಮೈಕ್ ನಿಂದ ಕಿರಿಕಿರಿಯಾಗುತ್ತಿದೆ ಎಂದು ಜನ ಬಂದು ಹೇಳಿದಾಗ ನಾವು ಅವರ ಮಾತಿಗೆ ಮರ್ಯಾದೆ ಕೊಟ್ಟು ಸುಪ್ರಿಂ ಆದೇಶದಂತೆ ಸೌಂಡ್ ಹಾಕುತ್ತೇವೆ ಬದಲಿಗೆ ಯಾರೋ ಹೇಳಿದರೆಂದು ಮೈಕ್ ಕಿತ್ತು ಎಸೆಯಲ್ಲಾ ಎಂದಿದ್ದಾರೆ.
ಮೈಕ್ ತೆಗೆಯಿರಿ ಎಂದು ಹೇಳುತ್ತಿರುವ ಕೆಲ ಸಂಘಟನೆಗಳ ಮಾತಿಗೆ ನಾವು ಕಿವಿ ಕೊಡುವುದಿಲ್ಲ ಸುಪ್ರೀಂ ಆದೇಶವನ್ನು ಬ್ರೇಕ್ ಮಾಡಲ್ಲಾ ಈಗಾಗಲೆ ಈ ಡಿವೈಸ್ ನ್ನು ಎಲ್ಲಾ ಮಸೀದಿಗಳಲ್ಲಿಯೂ ಫಿಕ್ಸ್ ಮಾಡಲು ಸೂಚಿಸಿದ್ದೇವೆ, ಎಲ್ಲರೂ ಅಳವಡಿಸಿಕೊಳ್ಳುತ್ತೇವೆ ಎಂದಿದ್ದಾರೆ ಅದು ಬಿಟ್ಟು ಮೈಕ್ ಗಳನ್ನೇ ತೆಗೆದು ಬಿಸಾಕಿ ಎಂದರೆ ನಾವು ಕೇಳುವುದಿಲ್ಲ ಎಂದಿದ್ದಾರೆ.
ಯಾರಿಗೂ ತೊಂದರೆ ಕೊಡುವುದು ನಮ್ಮ ಧರ್ಮದಲ್ಲಿ ಇಲ್ಲ.. ತೊಂದರೆ ಕೊಡುವ ಉದ್ದೇಶವೂ ನಮ್ಮದಲ್ಲ ಎಂದಿದ್ದಾರೆ.
PublicNext
04/04/2022 07:26 pm