ಆನೇಕಲ್ : ಅತ್ತಿಬೆಲೆ ಪೊಲೀಸ್ ಇನ್ಸ್‌ಪೆಕ್ಟರ್ ವಿಶ್ವನಾಥ್ ರಿಯಲ್ ಎಸ್ಟೇಟ್ ಏಜೆಂಟ್ ಹಾಗೂ ಇನ್ಸ್‌ಪೆಕ್ಟರ್ ದೌರ್ಜನ್ಯ ಖಂಡಿಸಿ ಇಂದು ಬರಗಾರನಹಳ್ಳಿ ಗೇಟ್ ಬಳಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.. ನೂರಾರು ಕಾರ್ಯಕರ್ತರು ಹಾಗೂ ಮುಖಂಡರುಗಳು ಅತ್ತಿಬೆಲೆ ಇನ್ಸ್‌ಪೆಕ್ಟರ್ ವಿರುದ್ಧ ದಿಕ್ಕಾರ ಆಕ್ರೋಶ ಹೊರ ಹಾಕಿದ್ದರು
ಇನ್ನು ಬರಗಾರನಹಳ್ಳಿ ಗೇಟ್‌ನ ಬಳಿ ಇರುವ ಸರ್ವೆ ನಂಬರ್ 27/1ರಲ್ಲಿ 2 ಎಕರೆ 14 ಗುಂಟೆ ಜಾಗವನ್ನು ವಿವಾದಿದ ಜಮೀನಾಗಿದ್ದು, ನ್ಯಾಯಾಲಯದಲ್ಲಿ ಕೇಸ್ ಕೂಡ ದಾಖಲಾಗಿದೆ ವಾದಿ ಮತ್ತು ಪ್ರತಿವಾದಿಗಳ ನಡುವೆ ಕೂಡ ಮುಸುಕಿನ ಗುದ್ದಾಟ ಸಹ ನಡಿತಿದೆ. ಆದರೆ ಇನ್ಸ್‌ಪೆಕ್ಟರ್ ವಿಶ್ವನಾಥ್ ಜಮೀನಿನ ಮಾಲೀಕರಿಗೆ ಕಿರುಕುಳ ಮತ್ತು ದೌರ್ಜನ್ಯ ನೀಡ್ತಿದ್ದಾರೆ.. ಜೊತೆಗೆ ನೊಂದ ರೈತ ಶ್ರೀರಾಮ್ ದೂರು ಕೊಡಲು ಹೋಗಿದ್ದಾಗ ಅವಾಚ್ಯ ಶಬ್ದಗಳಿಂದಲೂ ಸಹ ನಿಂದನೆ ಮಾಡಿ ಅವಮಾನ ಮಾಡಿದ್ದಾರೆ ಅಂತ ಆರೋಪದ ಹಿನ್ನೆಲೆ ಇಂದು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿವೆ .
ಇನ್ನು ಯಾವುದೇ ರೀತಿಯ ಆಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಯನ್ನ ಒದಗಿಸಲಾಗಿತ್ತು. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಇನ್ಸ್‌ಪೆಕ್ಟರ್ ವಿಶ್ವನಾಥರನ್ನ ಅಮಾನತು ಮಾಡಬೇಕು ಕೊರ್ಟ್ ಆದೇಶವನ್ನು ಪಾಲನೆ ಮಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು..
PublicNext
11/09/2022 07:47 pm