ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಿಕ್ಷಣ ಇಲಾಖೆ ಪ್ರತಿಯೊಂದಕ್ಕೂ ಹಣವಸೂಲಿ ಮಾಡಲು ಮುಂದಾಗಿದೆ ಎಂದು ಗರಂ ಆದ ಖಾಸಗಿ ಶಾಲೆಗಳು

ಬೆಂಗಳೂರು: ಖಾಸಗಿ ಶಾಲಾ ಒಕ್ಕೂಟದಿಂದ ಬಿಇಒ, ಡಿಡಿಪಿಐ ಸೇರಿದಂತೆ ಇತರೆ ಅಧಿಕಾರಗಳ ಪರ್ಸಂಟೇಜ್ ಆರೋಪ ವಿಚಾರವಾಗಿ ಖಾಸಗಿ ಶಾಲೆಗಳಿಂದ ಇಂದು ಸುದ್ದಿಗೋಷ್ಠಿ ನಡೆಸಲಾಗಿತ್ತು. ಸುದ್ದಿಗೋಷ್ಟಿಯಲ್ಲಿ ಖಾಸಗಿ ಶಾಲಾ ಒಕ್ಕೂಟದ ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೊಸ ಹೊಸ ಸಮಸ್ಯೆ ಹುಟ್ಟು ಹಾಕುತ್ತಿದ್ದಾರೆ. ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಹಣ ಮಾಡಲು ಹೊಸ ಹೊಸ ವಿಧಾನಗಳನ್ನು ಶಾಲೆಗಳಲ್ಲಿ ಅಳವಡಿಕೆ ಮಾಡಲಾಗ್ತಿದೆ. ಹೀಗಾಗಿ ಅನಿವಾರ್ಯವಾಗಿ ಪ್ರದಾನಮಂತ್ರಿಗಳಿಗೆ ಪತ್ರ ಬರೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ಪ್ರತಿ ವರ್ಷ ಮಾನ್ಯತೆ ನವೀಕರಣ ಅಂತ ಸಚಿವರ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಶಾಲೆಗಳಲ್ಲಿ ರಿನಿವಲ್ ಹಣ ಇಲ್ಲದೆ ಮಾನ್ಯತೆ ನವೀಕರಣ ಮಾಡಲ್ಲ ಅಂತಿದ್ದಾರೆ. ಇದಕ್ಕೆ ಸಂಬಂಧಿಸಿದ ಆಡಿಯೋ ಹಾಗೂ ಡ್ಯಾಕ್ಯುಮೆಂಟ್ಸ್ ಇದೆ. ಲಂಚ ಪಡೆಯಬೇಕು ಅಂತ ಹೊಸ ಮಾರ್ಗ ಶುರುಮಾಡಿದ್ದಾರೆ. ಅಗ್ನಿ ಸುರಕ್ಷತೆ ಹೆಸರಲ್ಲಿ ಹಣ ಪೀಕುತ್ತಿದ್ದಾರೆ. ಇದರಿಂದ ಬಜೆಟ್ ಶಾಲೆಗಳಿಗೆ ಸಮಸ್ಯೆಯಾಗ್ತಿದೆ.

ಆರ್‌ಟಿಇ ಮರುವತಿ ಶುಲ್ಕ ವಾಪಸ್ ಪಡೆಯಲು 50% ಕೊಡಬೇಕು. ಹೀಗಾಗಿ ಹಣ ತೆಗೆದುಕೊಳ್ಳುವುದೇ ಬೇಡ ಅಂತ ಡಿಸೈಡ್ ಮಾಡಿದ್ದೇವೆ. ಅಗ್ನಿ ಸುರಕ್ಷೆಯನ್ನು ಅನ್‌ಲೈನ್ ವ್ಯವಸ್ಥೆ ಮಾಡಿ ಅಂತ ಮನವಿ ಮಾಡಿದ್ದೇವೆ. ಆದ್ರೆ ಈವರೆಗೆ ಯಾವುದೇ ಕ್ರಮ ಆಗಿಲ್ಲ. NOC ಪಡೆಯಲು ಪ್ರತಿ ಟೇಬಲ್ ಮೂವ್ ಆಗುತ್ತೆ BEO ಆಫೀಸ್ TO ಮಿನಿಸ್ಟರ್ ವರೆಗೆ ಹಣ ಕೊಡಬೇಕು. ಪ್ರತಿ ಟೇಬಲ್‌ಗೂ ಹಣ ಕೊಡಬೇಕು ಎಂದು ಲೋಕೇಶ್ ತಾಳಿಕಟ್ಟೆ ಸರ್ಕಾರವನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಖಾಸಗಿ ಶಾಲೆಗಳಿಂದ ಹಣ ವಸೂಲಿಗೆ ಸೃಷ್ಟಿ ಮಾಡಿರೋ ಸಮಸ್ಯೆಗಳ ಪಟ್ಟಿ ಇಂತಿದೆ

1 . RR( ಮಾನ್ಯತೆ ನವೀಕರಣ) ನೀಡಲು ಲಕ್ಷಾಂತರ ಹಣ ಇಲಾಖೆಯ ಅಧಿಕಾರಿಗಳಿಗೆ ಕೊಡಬೇಕು

2. ಲಂಚ ಪಡೆಯಲು ಹೊಸ ಮಾರ್ಗ ಅನ್ವೇಷಣೆ (ಅಗ್ನಿ ಸುರಕ್ಷತಾ ಪ್ರಮಾಣ ಪತ್ರಕ್ಕೆ )

3. RTE ಶುಲ್ಕ ಮರುಪಾವತಿ ಪಡೆಯಲು 30ರಿಂದ 40 % ಲಂಚ ವಸೂಲಿ

4. ಅನ್ಯ ಪಠ್ಯಕ್ರಮ ಅನುಸರಿಸಲು NOCಗಾಗಿ ಬಾರಿ ಭ್ರಷ್ಟಾಚಾರ

5. ದಾಖಲೆಗಳ ನೆಪದಲ್ಲಿ ತಿಂಗಳಿಗೊಮ್ಮೆ ಮಾಮೂಲಿ ವಸೂಲಿ

6 . ವರ್ಷಕ್ಕೊಮ್ಮೆ ವರ್ಗಾವಣೆಯ ದಂಧೆ

7. ಸರ್ಕಾರಿ ಶಾಲೆಗಳನ್ನು ಮರೆತಿರುವ ಶಿಕ್ಷಣ ಮಂತ್ರಿಗಳು

8 . ಧಾರ್ಮಿಕ ಸೂಕ್ಷ್ಮ ವಿಚಾರಗಳಿಂದ ವಿದ್ಯಾರ್ಥಿಗಳ ಮನಸ್ಸನ್ನು ಕಲುಷಿತಗೊಳಿಸುತ್ತಿರುವುದು

Edited By : Somashekar
PublicNext

PublicNext

26/08/2022 02:25 pm

Cinque Terre

27.2 K

Cinque Terre

1

ಸಂಬಂಧಿತ ಸುದ್ದಿ