ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇದು ಪಬ್ಲಿಕ್ ನೆಕ್ಸ್ಟ್ ತಾಕತ್ತು...ರೌಡಿ‌ಯ ಅಕ್ರಮ ಶೆಡ್ ಉದುರಿ ಬಿತ್ತು..! ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್...!

ಸ್ಪೋಟಕ ವರದಿ-- ಪ್ರವೀಣ್ ನಾರಾಯಣ ರಾವ್

ಬೆಂಗಳೂರು: ಸದಾ ಜನಪರವಾದ ವರದಿಗಳಿಂದ ಜನಮಾನಸದಲ್ಲಿ‌ಅಚ್ಚಳಿಯದ ಛಾಪು ಮೂಡಿಸಿದ ಪಬ್ಲಿಕ್ ನೆಕ್ಸ್ಟ್ ನಿನ್ನೆ( 19/08/22) ತಾನೆ ಮಾಡಿದ ವರದಿಗೆ ವರದಿ ಮಾಡಿದ 12 ಗಂಟೆಗಳ ಒಳಗೇ ಸ್ಪಂದನೆ ಸಿಕ್ಕಿದೆ..

ಗಾಂಧಿನಗರದ ಮುಖ್ಯರಸ್ತೆಯಲ್ಲಿ ಅಕ್ರಮವಾಗಿ ಗೋಝಿಲೋ ಕಂಪನಿ ಹಾಕಿಕೊಂಡಿದ್ದ ಶೆಡ್ ತೆರವುಗೊಂಡಿದೆ.. ಸಾರ್ವಜನಿಕರ ಮನವಿಯ ಮೇರೆಗೆ ನಮ್ಮ ಪಬ್ಲಿಕ್ ನೆಕ್ಸ್ಟ್ ತಂಡ ಅಕ್ರಮ ಒತ್ತುವರಿ ಸ್ಥಳಕ್ಕೆ ತೆರಳಿ ವರದಿ ಮಾಡಿತ್ತು..

ವರದಿ ಮಾಡುವಾಗ ಗೂಂಡಾಗಳು ನಮ್ಮ ಮೇಲೆ ಹಲ್ಲೆಗೂ ಮುಂದಾಗಿದ್ರು..ಆದರೆ‌ ಯಾವುದಕ್ಕೂ ಮಣಿಯದ ಪಬ್ಲಿಕ್ ನೆಕ್ಸ್ಟ್ ಇದನ್ನು ಸವಾಲಾಗಿ ಸ್ವೀಕರಿಸಿತ್ತು..

ವರದಿ ಬಿತ್ತರವಾದ ಬೆನ್ನಲ್ಲೇ ಇದಕ್ಕೆ ವ್ಯಾಪಕವಾದ ಬೆಂಬಲವ್ಯಕ್ತವಾಗಿತ್ತು.. ವರದಿ ಬಿತ್ತರವಾದ ಬೆನ್ನಲ್ಲೇ ಬೆಂಗಳೂರು ಸಂಚಾರ ಪಶ್ಚಿಮ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಅವರು ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳನ್ನು ಕಳಿಸಿ ಅಕ್ರಮ ಒತ್ತುವರಿ ಶೆಡ್ ಅನ್ನು ತೆರವು ಗೊಳಿಸಿದ್ದಾರೆ...

ಅಲ್ಲಿಗೆ ನಿನ್ನೆ ತಾನೆ ನಾವು ಸ್ವೀಕರಿಸಿದ ಸವಾಲಿಗೆ ಉತ್ತರವನ್ನು ಜಬರ್ ದಸ್ತ್ ಆಗಿಯೇ ಕೊಟ್ಟಿದ್ದೇವೆ... ಪೊಲೀಸ್ ಅಧಿಕಾರಿ ಕುಲದೀಪ್ ಕುಮಾರ್ ಜೈನ್ ಅವರಿಗೆ ನಮ್ಮ ವಿಶೇಷ ಅಭಿನಂದನೆಗಳು...

ನಮ್ಮ‌ ಹೋರಾಟಕ್ಕೆ ಬೆಂಬಲವಾಗಿ‌ ನಿಂತ ಸಾಮಾಜಿಕ ಕಾರ್ಯಕರ್ತ ರಮೇಶ್ ಅವರಿಗೆ, ಕರುನಾಡವಿಜಯ ಸೇನೆ ರಾಜ್ಯಾಧ್ಯಕ್ಷ ಹೆಚ್, ಎನ್, ದೀಪಕ್ ಅವರಿಗೆ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಅವರಿಗೆ, ಹೋರಾಟಗಾರ ಶರವಣ ಅವರಿಗೆ, ಚೇತನ್ ಅವರಿಗೆ ಹಾಗೂ ಎಲ್ಲಾ ಹಿತೈಷಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ....

ಪ್ರವೀಣ್ ರಾವ್

Edited By : Somashekar
PublicNext

PublicNext

20/08/2022 07:52 pm

Cinque Terre

44.4 K

Cinque Terre

8

ಸಂಬಂಧಿತ ಸುದ್ದಿ