ಬೆಂಗಳೂರು: ಸಚಿವ ಶ್ರೀರಾಮುಲು ಅವರು ಸಚಿವರಾದ ಮೇಲೆ ನಿಯಮ ಬಾಹಿರವಾಗಿ ಸಾಕಷ್ಟು ವರ್ಗಾವಣೆ ನಡೆದಿರುವ ಆರೋಪ ಕೇಳಿಬಂದಿದೆ. ಕಳೆದ ಕೆಲ ತಿಂಗಳಲ್ಲಿ 714 ಮಂದಿ ವರ್ಗಾವಣೆ ಆಗಿದ್ದು, ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ.
ಹೌದು...ಸಚಿವ ಶ್ರೀರಾಮುಲುರವರ ಕಚೇರಿಯಿಂದಲ್ಲೇ ವರ್ಗಾವಣೆಗೆ ಶಿಫಾರಸು ನಡೆಯುತ್ತಿದೆ. ಇದ್ರಿಂದ ಸೀನಿಯಾರಿಟಿ ಮೇಲೆ ವರ್ಗಾವಣೆಗೆ ಕಾಯ್ತಿರುವ ಸಿಬ್ಬಂದಿಗೆ ಅನ್ಯಾಯವಾಗ್ತಿದೆ. ಈ ಸಂಬಂಧ ಸರ್ಕಾರಕ್ಕೆ ನೌಕರರ ಸಂಘ ದೂರನ್ನು ಕೂಡಾ ನೀಡಿದೆ.
ಇನ್ನೂ ಸಾರಿಗೆ ಇಲಾಖೆಯಲ್ಲಿ ನಡೆಯುತ್ತಿರುವ ವರ್ಗಾವಣೆ ದಂಧೆಯಲ್ಲಿ ಡ್ರೈವರ್, ಕಂಡಕ್ಟರ್ಸ್ಗೆ ಒಂದು ರೇಟ್ ಹಾಗೂ ಇತರೆ ಸಿಬ್ಬಂದಿಗೆ ಇನ್ನೊಂದು ರೇಟ್ ಫಿಕ್ಸ್ ಆಗಿದ್ದು, ಲಕ್ಷ - ಲಕ್ಷ ಹಣವನ್ನು ಸಚಿವರ ಹಿಂಬಾಲಕರು, ಕಚೇರಿ ಸಿಬ್ಬಂದಿ ಗಳು ಮಾಡ್ತಿದ್ದಾರೆ ಎಂದು ಸಾರಿಗೆ ನೌಕರರ ಸಂಘ ಗಂಭೀರ ಆಪಾದನೆ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನಡೆಸಿರುವ ಸಾರಿಗೆ ಸಚಿವ ಶ್ರೀರಾಮುಲು ನಾನೇನು ಸಾಚಾ ಅಂತಾ ಹೇಳಲ್ಲ. ನೌಕರರಿಂದ ಲಂಚ ಪಡೆಯುವಷ್ಟು ಕ್ರೂರಿ ನಾನಲ್ಲ ಎಂದಿದ್ದಾರೆ.
PublicNext
01/08/2022 07:00 pm