ಆನೇಕಲ್ : ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡುವಂತೆ ಒತ್ತಾಯಿಸಿ ಅತ್ತಿಬೆಲೆ ಕೈಗಾರಿಕಾ ಪ್ರದೇಶ ರಾಮಿ ಗೆಸ್ಟ್ ಲೈನ್ ಬಳಿ ಕರ್ನಾಟಕ ಜಾಗೃತಿ ವೇದಿಕೆ ವತಿಯಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.. ರಾಮಿ ಬೆಸ್ಟ್ ಲೈನ್ ನಿಂದ ಹಿಡಿದು ಕೈಗಾರಿಕಾ ಪ್ರದೇಶಗಳ ಸುತ್ತಮುತ್ತ ಪ್ರತಿಭಟನೆಯ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಕೈಗಾರಿಕಾ ಪ್ರದೇಶದಲ್ಲಿ ಸುತ್ತಮುತ್ತ ರಸ್ತೆಗಳು ಗುಂಡಿಗಳು ಬಿದ್ದಿದ್ದು, ಮುಚ್ಚುವಂತೆ ಒತ್ತಾಯಿಸಿ ಅಧಿಕಾರಿಗಳಿಗೆ ಶಾಪ ಹಾಕಿದ್ರು. ಇನ್ನೂ ರಸ್ತೆ ಗುಂಡಿಗಳ ಬಗ್ಗೆ ಗಮನ ಹರಿಸುವಂತೆ ಕೈಗಾರಿಕಾ ಪ್ರದೇಶದ ಅಧ್ಯಕ್ಷರಿಗೆ ಹಾಗೂ ನೆರಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಿಗೆ ದೂರನ್ನ ಸಲ್ಲಿಸಿದರು
ಇನ್ನು ಕೈಗಾರಿಕಾ ಪ್ರದೇಶ ಬಳಿ ಇರುವ ರಾಮಿ ಗೆಸ್ಟ್ ಲೈನ್ ಬಳಿ ರಸ್ತೆ ಗುಂಡಿಗಳು ಬಿದ್ದು ವಾಹನ ಸವಾರರಿಗೆ ಪ್ರತಿನಿತ್ಯ ಓಡಾಡಬೇಕಾದರೆ ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿದೆ. ಇನ್ನು ಇದರ ರಸ್ತೆಯಲ್ಲಿ ವಾಹನ ಸವಾರ ಬಿದ್ದು ಗಾಯಗಳಾಗಿರುವ ಘಟನೆಗಳು ಸಹ ನಡೆದಿದೆ.
ಈ ಬಗ್ಗೆ ಅಧಿಕಾರಿಗಳಿಗೆ ಗಮನಕ್ಕೂ ತಂದು ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಒಂದು ತಿಂಗಳ ಕಾಲ ಗಡುವು ನೀಡಿದ್ದು, ರಸ್ತೆ ಸರಿಪಡಿಸಿದ ಇಲ್ಲಂತ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಮಂಜುನಾಥ್ ದೇವ ಎಚ್ಚರಿಕೆಯನ್ನು ನೀಡಿದರು..
PublicNext
26/08/2022 06:17 pm