ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ರಿಯಲ್ ಎಸ್ಟೇಟ್ ಮಾಫಿಯಾ ಪ್ರಭಾವ; ಜಿಲ್ಲಾ ಕೇಂದ್ರ ದೇವನಹಳ್ಳಿ ಪಾಲಿಗೆ"

ದೊಡ್ಡಬಳ್ಳಾಪುರ: 1986ರಲ್ಲಿ ರಚನೆಯಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಇಲ್ಲಿಯವರೆಗೂ ಜಿಲ್ಲಾ ಕೇಂದ್ರ ಘೋಷಣೆಯಾಗಿಲ್ಲ. ಜಿಲ್ಲಾ ಕೇಂದ್ರಕ್ಕಾಗಿ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರದ ನಡುವೆ ಪೈಪೋಟಿ ಇದೆ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸುವುದ್ದಾಗಿ ಹೇಳಿದ್ದಾರೆ. ದೇವನಹಳ್ಳಿ ರಿಯಲ್ ಎಸ್ಟೇಟ್ ಮಾಫಿಯಾ ಪ್ರಭಾವವೇ ಸಚಿವರ ಹೇಳಿಕೆಗೆ ಕಾರಣವೆಂದು ಆರೋಪಿಸಲಾಗಿದೆ.

ನಮ್ಮ ರಾಜ್ಯದಲ್ಲಿ 31 ಜಿಲ್ಲೆಗಳಿದ್ದು, ಕೊಡಗು ಜಿಲ್ಲೆಯ ನಂತರ ಅತಿ ಚಿಕ್ಕ ಜಿಲ್ಲೆಯಲ್ಲಿ ಬೆಂಗಳೂರು ಗ್ರಾಮಾಂತರ ಸಹ ಒಂದು. ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲೂಕು ಒಳಗೊಂಡಿರುವ ಜಿಲ್ಲೆ. ರಾಜಧಾನಿ ಬೆಂಗಳೂರನ್ನು ಸುತ್ತುವರೆದಿರುವ ಜಿಲ್ಲೆಗೆ ಇಲ್ಲಿಯವರೆಗೂ ಜಿಲ್ಲಾ ಕೇಂದ್ರವಿಲ್ಲ.

75ನೇ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಸಚಿವ ಡಾ.ಕೆ. ಸುಧಾಕರ್, ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡುವುದಾಗಿ ಹೇಳಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಸಚಿವರ ಹೇಳಿಕೆ ದೊಡ್ಡಬಳ್ಳಾಪುರ ತಾಲೂಕು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವರು ತಮ್ಮ ಹೇಳಿಕೆ ಹಿಂತೆಗೆದುಕೊಳ್ಳದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ದೇವನಹಳ್ಳಿ ತಾಲೂಕಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ತಾಲೂಕಿನ ಸುತ್ತಮುತ್ತಲಿನ ಜಮೀನಿಗೆ ಬಂಗಾರದ ಬೆಲೆ ಇದೆ. ರಿಯಲ್ ಎಸ್ಟೇಟ್ ಕುಳಗಳು ಮತ್ತು ರಾಜಕಾರಣಿಗಳು ದೇವನಹಳ್ಳಿ ತಾಲೂಕಿನಲ್ಲಿ ಜಮೀನು ಖರೀದಿ ಮಾಡಿದ್ದಾರೆ. ದೇವನಹಳ್ಳಿ ಜಿಲ್ಲಾ ಕೇಂದ್ರವಾದರೆ ತಮ್ಮ ಜಮೀನಿಗೆ ಮತ್ತಷ್ಟು ಬೆಲೆ ಬರುತ್ತೆ ಎಂಬ ಕಾರಣಕ್ಕೆ ಸಚಿವರ ಮೇಲೆ ರಿಯಲ್ ಎಸ್ಟೇಟ್ ಕುಳಗಳು ಒತ್ತಡ ತಂದು ದೇವನಹಳ್ಳಿ ಜಿಲ್ಲಾ ಕೇಂದ್ರದ ಘೋಷಣೆ ಮಾಡಿಸಿದ್ದಾರೆ ಎಂಬುದು ದೊಡ್ಡಬಳ್ಳಾಪುರ ಹೋರಾಟಗಾರರ ವಾದ.

ಜನಸಂಖ್ಯೆ, ವಿಸ್ತೀರ್ಣ ದಲ್ಲಿ ದೇವನಹಳ್ಳಿಗಿಂತ ದೊಡ್ಡಬಳ್ಳಾಪುರವೇ ಪ್ರಬಲವಾಗಿದ್ದು, ಉಪ ವಿಭಾಗ ಕಚೇರಿ ಸಹ ಹೊಂದಿದೆ. ಎಲ್ಲಾ ರೀತಿಯ ಮಾನದಂಡಗಳ ಪ್ರಕಾರ ದೊಡ್ಡಬಳ್ಳಾಪುರಕ್ಕೆ ಜಿಲ್ಲಾ ಕೇಂದ್ರ ಸಿಗಬೇಕಿತ್ತು ಎಂಬುದು ದೊಡ್ಡಬಳ್ಳಾಪುರ ನಿವಾಸಿಗಳ "ದೊಡ್ಡ" ವಾದವಾಗಿದೆ.

Edited By : Somashekar
PublicNext

PublicNext

18/08/2022 02:42 pm

Cinque Terre

23.1 K

Cinque Terre

2

ಸಂಬಂಧಿತ ಸುದ್ದಿ