ಬೆಂಗಳೂರು: ನೇಮಕಾತಿ ಆದೇಶ ನೀಡಬೇಕು ಮತ್ತು ಮರುಪರೀಕ್ಷೆ ರದ್ದು ಗೊಳಿಸಬೇಕೆಂದು ಪಟ್ಟು ಹಿಡಿದ ಅಭ್ಯರ್ಥಿಗಳು, ನಗರದ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಕಣ್ಣೀರು ಹಾಕುತ್ತಲೇ ತಮ್ಮ ಅಳಲನ್ನೂ ತೋಡಿಕೊಳ್ಳುತ್ತಿದ್ದಾರೆ.
ಇನ್ಮೂ ತನಿಖೆ ನಡೀತಿದೆ. ಆದ್ರೆ ಈಗಲೇ ಮರು ಪರೀಕ್ಷೆಗೆ ಆದೇಶ ಮಾಡಿದ್ದಾರೆ. ನಮ್ಮ ಮನೆಯಲ್ಲಿ ಎಲ್ಲರೂ ಡಿಪ್ರೆಷನ್‌ನಲ್ಲಿಯೇ ಇದ್ದಾರೆ.ದಿಢೀರ್ ಅಂತ ಮರುಪರೀಕ್ಷೆಗೆ ಮುಂದಾದ್ರೆ ಹೇಗೆ ? ನಾವು ಪ್ರಾಮಾಣಿಕತೆಯಿಂದ ಪರೀಕ್ಷೆ ಬರೆದಿದ್ದೇವೆ. ಯಾರು ತಪ್ಪು ಮಾಡಿದ್ದಾರೋ ಅವ್ರಿಗೆ ಶಿಕ್ಷೆಯಾಗಲಿ. ನಿಜವಾಗಿ ನೊಂದವರು ನಾವು. ತಪ್ಪು ಮಾಡಿದವ್ರು ಚೆನ್ನಾಗಿದ್ದಾರೆ. ನಾವು ಶಿಕ್ಷೆ ಅನುಭವಿಸುತ್ತಿದ್ದೇವೆ. ಯಾಕೆ ನಮಗೆ ಈ ಶಿಕ್ಷೆ ? ಯಾರೋ ಮಾಡಿದ ತಪ್ಪಿಗೆ ನಮಗ್ಯಾಕೆ ಈ ನೋವು ? ನಿಜವಾಗಿ ನೊಂದವರು ನಾವು ಅಂತಲೇ ಪಿಎಸ್‌ಐ ಅಭ್ಯರ್ಥಿ ಪೂಜಾ ಹೇಳಿಕೊಂಡಿದ್ದಾರೆ.
ಕಲಬುರಗಿ ಎಲ್ಲಿ..? ದಕ್ಷಿಣ ಕನ್ನಡ ಎಲ್ಲಿ ? ತನಿಖೆ ಮಾಡಿ, ಮೊದಲು ಮರು ಪರೀಕ್ಷೆ ರದ್ದು ಮಾಡಿ, ಆದೇಶ ಪ್ರತಿ ಕೊಡಿ, ಮುಂದೆ ಕಾನೂನು ಹೋರಾಟವನ್ನ ನಾವು ಮಾಡುತ್ತೇವೆ ಎಂದು ಪಿಎಸ್‌ಐ ಅಭ್ಯರ್ಥಿಗಳು ತಿಳಿಸಿದ್ದಾರೆ.ಸರ್ಕಾರ ಈ ಬಗ್ಗೆ ಕ್ರಮತೆಗೆದುಕೊಳ್ಳಬೇಕು. ಸಿ.ಐ.ಡಿ ನಮ್ಮನ್ನ ಯಾವ ರೀತಿ ಬೇಕಾದ್ರು ವಿಚಾರಣೆ ಮಾಡಲಿ. ಏನಾದ್ರು ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಲಿ ಎಂದು ಅಭ್ಯರ್ಥಿಗಳು ಪಟ್ಟು ಹಿಡಿದು ಕುಳಿತ್ತಿದ್ದಾರೆ.
ಇನ್ನೂ ಈ ಬಗ್ಗೆ ಪೋಷಕರು ಕೂಡ ಪ್ರತಿಕ್ರಿಯಿಸಿದ್ದಾರೆ.ನಮ್ಮ ಮಗಳು ತುಂಬಾ ಕಷ್ಟ ಪಟ್ಟು ಓದಿದ್ದಾಳೆ. ಕೋವಿಡ್ ಟೈಂ ನಲ್ಲಿ ಮಗಳಿಗೆ ಮದುವೆ ಮಾಡಿದ್ವಿ. ನನ್ನ ಮಗಳು, ಗಂಡನ ಮನೆಯವ್ರಿಗೆ ಕೇಳಿಕೊಂಡು ಓದಿದ್ದಾಳೆ. ಕಷ್ಟದ ಜೀವನದಲ್ಲಿ ಓದುತ್ತಿದ್ದಾಳೆ. ಆದೇಶ ಪ್ರತಿ ಕೊಡಿ. ಮಕ್ಕಳಿಗೆ ಅನ್ಯಾಯ ಮಾಡಬೇಡಿ ಎಂದು ಪೊಷಕರು ಅಳಲನ್ನ ತೋರಿಕೊಂಡಿದ್ದಾರೆ.
PublicNext
02/05/2022 05:31 pm