ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗುಂಡಿ ಮುಚ್ಚದ ಅಧಿಕಾರಿಗಳ ವಿರುದ್ಧ ಪೋಸ್ಟರ್ ಅಸ್ತ್ರ!; ರಸ್ತೆ ರಿಪೇರಿಗೆ ಪಾಲಿಕೆಯೀಗ ಅವಸರ

ವರದಿ: ಗೀತಾಂಜಲಿ

ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆ ರಿಪೇರಿ ಮಾಡದ ಅಧಿಕಾರಿಗಳ ವಿರುದ್ಧ ಜನ ಸಿಡಿದೆದ್ದಿದ್ದಾರೆ. ಗುಂಡಿ ಮುಚ್ಚಿಸೋಕೆ ಅಧಿಕಾರಿಗಳಿಗೆ ಅವಾಚ್ಯವಾಗಿ ನಿಂದಿಸಿ ಬರೆದಿರುವ ಪೋಸ್ಟರ್ ಗಳನ್ನು ಮುಖ್ಯ ರಸ್ತೆಗಳಿಗೆ ಅಂಟಿಸ್ತಿದ್ದಾರೆ.‌

ಮಲ್ಲೇಶ್ವರಂ ರಸ್ತೆಯಲ್ಲಿ ಈಗ ಪೋಸ್ಟರ್‌ ಗಳದ್ದೇ ಕಾರುಬಾರಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಬೆಂಗಳೂರಿನಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳ‌ ನರಕ ದರ್ಶನವಾಗ್ತಿದೆ. ಪಾಲಿಕೆಗೆ ಎಷ್ಟೇ ಛೀಮಾರಿ ಹಾಕಿದ್ರೂ ಪ್ರಯೋಜನವಾಗಿಲ್ಲ. ಈ ಗುಂಡಿಗಳಿಂದ ರೋಸಿ ಹೋದ ಜನ ಇದೀಗ, ಅಧಿಕಾರಿಗಳಿಗೆ ಅವಾಚ್ಯವಾಗಿ ನಿಂದಿಸಿ ಪ್ರಮುಖ ರಸ್ತೆಗಳಲ್ಲಿ ಪೋಸ್ಟರ್ ಅಂಟಿಸ್ತಿದ್ದಾರೆ.

ಸಚಿವ ಅಶ್ವಥ್ ನಾರಾಯಣ ಕ್ಷೇತ್ರ ಮಲ್ಲೇಶ್ವರಂ ಹಾಗೂ ಗಾಂಧಿನಗರದಲ್ಲಿ ಬೇ... ಅಧಿಕಾರಿಗಳಾ, ಬೇಗ ರಸ್ತೆ ಸರಿ ಮಾಡ್ರೋ ಅನ್ನೋ ಪೋಸ್ಟರ್ ಗಳು ಕಾಣ್ತಿದೆ. ಮಲ್ಲೇಶ್ವರಂನಲ್ಲಿ2 ವರ್ಷಗಳಿಂದ ನಾನಾ ಕಾಮಗಾರಿ ನಡೆಯುತ್ತಿವೆ. ಬೇಕಾಬಿಟ್ಟಿ ರಸ್ತೆ ಅಗೆದಿದ್ದು, ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ.

ಇದ್ರಿಂದ ರೋಸಿ ಹೋದ ಜನ, ಎಲೆಕ್ಟ್ರಿಕಲ್ ಬಾಕ್ಸ್ ಮೇಲೆ ಅಧಿಕಾರಿಗಳಿಗೆ ನಿಂದಿಸಿ ಪೋಸ್ಟರ್ ಅಂಟಿಸಿದ್ದಾರೆ. ಇದ್ರಿಂದ ಮುಜುಗರಕ್ಕೊಳಗಾದ ಪಾಲಿಕೆ ಅಧಿಕಾರಿಗಳು, ಗುಂಡಿಗಳಿಗೆ ಕಲ್ಲು, ಜಲ್ಲಿ ಹಾಕಿ ಮುಚ್ಚಿಸೋಕೆ ಮುಂದಾಗಿದ್ದಾರೆ. ಇಷ್ಟು ಮಾತ್ರವಲ್ಲ, ಎಲೆಕ್ಟ್ರಿಕಲ್ ಬಾಕ್ಸ್ ಗಳ ಮೇಲೆ ಅಂಟಿಸಿದ್ದ ಪೋಸ್ಟರ್ ಗಳನ್ನೂ ತೆರವು ಮಾಡಲಾಗ್ತಿದೆ.

ಮಲ್ಲೇಶ್ವರಂ 9, 10ನೇ ಕ್ರಾಸ್ ನಲ್ಲೂ ಪೋಸ್ಟರ್ ಗಳು ರಾರಾಜಿಸಿವೆ. ಇಲ್ಲಿಯೂ ಹೆಜ್ಜೆ ಹೆಜ್ಜೆಗೂ‌ ಡೆಡ್ಲಿ ಗುಂಡಿಗಳೇ ಬಿದ್ದಿವೆ. ಸ್ಕೂಲ್ ಬಸ್ ಗಳು ಸಂಚಾರ ಮಾಡೋಕೂ ಆಗ್ತಿಲ್ಲ.‌ ಓಲಾ, ಉಬರ್ ಅಂತ ಅಧಿಕಾರಿಗಳಿಗೆ ಬೈದುಕೊಂಡೇ ಬುಕ್ಕಿಂಗ್ ಲಾಗಿನ್ ಆಗ್ತಾರೆ.‌ ಹಾಳಾದ ರಸ್ತೆಯಿಂದ ಕಂಗೆಟ್ಟ ಜನ, ಈ ಭಾಗದಲ್ಲಿಯೂ ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಪೋಸ್ಟರ್ ಗಳು ವೈರಲ್ ಆಗಿ, ಜನರು ಬಿಬಿಎಂಪಿಗೆ ಹಿಗ್ಗಾಮುಗ್ಗಾ ಕ್ಲಾಸ್ ತಗೋತಿದ್ದಾರೆ. ಗುಂಡಿ ಮುಚ್ಚೋಕೆ ಅಧಿಕಾರಿಗಳು ದೌಡಾಯಿಸ್ತಿದ್ದಾರೆ. ಆಯಾಯ ಸ್ಥಳೀಯರ ತಾಳ್ಮೆಯ ಕಟ್ಟೆ ಒಡೆದಿದ್ದು, ತಾವು ಕೂಡ ಪೋಸ್ಟರ್ ಅಂಟಿಸಿ ರಸ್ತೆ ಸರಿ ಮಾಡಿಸಿಕೊಳ್ಳೋಣ ಅನ್ನೋ ಮನಸ್ಥಿತಿಗೆ ಬಂದಿದ್ದಾರೆ.

Edited By : Nagesh Gaonkar
PublicNext

PublicNext

19/07/2022 06:36 pm

Cinque Terre

36.22 K

Cinque Terre

1

ಸಂಬಂಧಿತ ಸುದ್ದಿ