ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್:‌ 4 ದಶಕಗಳ ರಸ್ತೆ ಅಗಲೀಕರಣ ಬೇಡಿಕೆ ಈಡೇರಿಕೆ; ಶಾಸಕ ಶಿವಣ್ಣ ಗುದ್ದಲಿ ಪೂಜೆ

ಆನೇಕಲ್: ಅದ್ಯಾವಾಗ ಆನೇಕಲ್ ಹಾಗೂ ತಳಿ ರಸ್ತೆ ಅಗಲೀಕರಣವಾಗುತ್ತೋ !? ನಾವು ಯಾವಾಗ ಆ ರಸ್ತೆಯಲ್ಲಿ ಓಡಾಡುತ್ತೇವೋ, ಅಂತೆಲ್ಲ ಸಾಕಷ್ಟು ಜನರು ನಿರೀಕ್ಷೆ ಇಟ್ಕೊಂಡಿದ್ರು. ಇದೀಗ ಆ 4 ದಶಕಗಳ ಹೋರಾಟದ ಫಲ ಎಂಬಂತೆ ಇಂದು ತಳಿ ರಸ್ತೆ ಅಗಲೀಕರಣದ ಕಾರ್ಯಾರಂಭವಾಯಿತು.

ಹೌದು, ಆನೇಕಲ್ ಪಟ್ಟಣದ ಚೌಡೇಶ್ವರಿ ವೃತ್ತದಿಂದ ಹಿಡಿದು ತಳಿ ಸಂಪರ್ಕ ಕಲ್ಪಿಸುವ ರಸ್ತೆಗೆ ಸುಮಾರು ಒಂದು ಕಿ.ಮೀ. ವರೆಗೆ 8 ಅಡಿಗಳ ಕಿರಿದಾದ ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ಇತ್ತು. ಈ ಬಗ್ಗೆ ಸಾಕಷ್ಟು ದೂರುಗಳೂ ಕೇಳಿ ಬಂದಿದ್ದು, ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿಯಿಂದ ಜನರು ಹೈರಾಣಾಗಿದ್ದರು.

ಗುದ್ದಲಿ ಪೂಜೆ: ಇಂದು ರಸ್ತೆ ಅಗಲೀಕರಣಕ್ಕೆ ಶಾಸಕ ಶಿವಣ್ಣ ಗುದ್ದಲಿ ಪೂಜೆ ನೆರವೇರಿಸಿ, ರಸ್ತೆಯ ಎರಡೂ ಬದಿಯ ಕಟ್ಟಡ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದರು.

ಇನ್ನು, ತಲೆತಲಾಂತರಗಳಿಂದ ರಸ್ತೆ ಬದಿಯಲ್ಲಿದ್ದ ನೂರಾರು ಮನೆಗಳ ಮಾಲೀಕರಿಗೆ ಸರ್ಕಾರದಿಂದ ಪರಿಹಾರ ಕೊಟ್ಟು ಬೇರೆ ಜಾಗದಲ್ಲಿ ಸೂರು ಕಟ್ಟಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕೆಲವರಿಗೆ ಚೆಕ್ ಮೂಲಕ ಹಣ ಪಾವತಿ ಮಾಡಲಾಗಿದೆ. ಜನರ ಸಮಸ್ಯೆಗೆ ಸ್ಪಂದಿಸಿದ ಶಾಸಕ ಶಿವಣ್ಣಗೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿದರು.

- ಹರೀಶ್ ಗೌತಮನಂದ, ʼಪಬ್ಲಿಕ್ ನೆಕ್ಸ್ಟ್ʼ ಆನೇಕಲ್

Edited By : Nagesh Gaonkar
Kshetra Samachara

Kshetra Samachara

18/03/2022 06:55 pm

Cinque Terre

3.06 K

Cinque Terre

0

ಸಂಬಂಧಿತ ಸುದ್ದಿ