ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಉಕ್ಕಿದ ಬೆಳ್ಳಂದೂರು..ಮುಳುಗಿದ ಬೆಂಗ್ಳೂರು..

ಪ್ರತ್ಯಕ್ಷ ವರದಿ- ಪ್ರವೀಣ್ ರಾವ್

ಬೆಂಗಳೂರು: ಇತಿಹಾಸದಲ್ಲಿ ಕಂಡುಕೇಳರಿಯದ ಮಳೆಬಿದ್ದ ಪರಿಣಾಮ ಇಡೀ ರಾಜ್ಯ ಜಲಪ್ರಳಯಕ್ಕೆ ತುತ್ತಾಗಿ ಕಂಗಾಲಾಗಿ ಹೋಗಿದೆ.. ಅದರಲ್ಲೂ ರಾಜಧಾನಿ ಬೆಂಗಳೂರಿನ ಸ್ಥಿತಿಯಂತೂ ಗಂಭೀರವಾಗಿ ಹೋಗಿದೆ..

ಐಟಿ.ಬಿಟಿ ಕಂಪನಿಗಳು ಬೀಡು ಬಿಟ್ಟಿರುವ ಬೆಳ್ಳಂದೂರು, ಮಾರತ್ ಹಳ್ಳಿ, ಸರ್ಜಾಪುರ ರಸ್ತೆಯ ಸುತ್ತಮುತ್ತಲಿನ ಕೆರೆಗಳೆಲ್ಲವೂ ಕೋಡಿ ಬಿದ್ದು ಉಕ್ಕಿ ಹರಿದು ಸುತ್ತಮುತ್ತಲಿನ ಪ್ರದೇಶ ಗಳೆಲ್ಲವೂ ಜಲಾವೃತವಾಗಿವೆ. ಪ್ರತಿಷ್ಟಿತ ಐ.ಟಿ. ಬಿ.ಟಿ. ಕಂಪನಿಗಳು ನೀರಿನ ಹೊಡೆತಕ್ಕೆ ಸಿಕ್ಕಿ ಕಂಗಾಲಾಗಿ ಹೋಗಿವೆ.

ರಸ್ತೆಗಳು ನದಿಗಳಂತಾಗಿ ಹೋಗಿವೆ. ದೊಡ್ಡನೆಕ್ಕುಂದಿ ಕೆರೆ ಕೋಡಿ ಬಿದ್ದು ಉಕ್ಕಿಹರಿದ ಪರಿಣಾಮ ರೇನ್ ಬೋ ಲೇಔಟ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದ್ದು. ಜನರನ್ನು ದೋಣಿ ಮೂಲಕ ಸುರಕ್ಷಿತ ಸ್ಥಳಗಳಿಗೆ ತಲುಪಿಸಲಾಗಿದೆ.. ಸತತ ಮೂರುದಿನಗಳಿಂದ ನಿಂತಿರುವ ನೀರು ಇನ್ನೂ ಇಳಿದಿಲ್ಲ..

ಜನಜೀವನ ದುರ್ಬರವಾಗಿ ಹೋಗಿದೆ.. ಕಂಡ ಕಂಡ ಕೆರೆಗಳನ್ನು ಮುಚ್ಚಿ,‌ರಾಜಾಕಾಲುವೆಗಳನ್ನು ಒತ್ತುವರಿ ಮಾಡಿ ಬೇಕಾಬಿಟ್ಟಿ ಲೇಔಟ್ ಗಳನ್ನು ಮಾಡಿ ಪ್ರಕೃತಿಯ ಮೇಲೆ ಶೋಷಣೆ ಮಾಡಿದ್ದರ ಪರಿಣಾಮವನ್ನು,ಪಾಪದ ಫಲವನ್ನು ಇವತ್ತು ಉಣ್ಣಬೇಕಾದ ಪರಿಸ್ಥಿತಿ ಎದುರಾಗಿದೆ...

ಗ್ರೌಂಡ್ ರಿಪೋರ್ಟ್ -- ಪ್ರವೀಣ್ ರಾವ್

Edited By : Somashekar
PublicNext

PublicNext

07/09/2022 06:32 pm

Cinque Terre

32.05 K

Cinque Terre

7

ಸಂಬಂಧಿತ ಸುದ್ದಿ