BBMP ನಿರ್ಲಕ್ಷ್ಯ, ಅಧಿಕಾರಿಗಳ ಜಾಣ ಕುರುಡಿಗೆ ಯಲಹಂಕ ವಲಯದಲ್ಲಿ ಸಾರ್ವಜನಿಕರ ಪಾರ್ಕ್ ಗೆ ಮೀಸಲಿಟ್ಟಿದ್ದ ಎರಡೂವರೆ ಎಕರೆ ಜಮೀನು ಭೂಗಳ್ಳರ ಪಾಲಾಗಿದೆ! ಸದ್ಯ ಮಾರುಕಟ್ಟೆಲಿ 70ರಿಂದ 100 ಕೋಟಿಗೂ ಅಧಿಕ ಬೆಲೆಯಿದೆ. ಈ ಬಗ್ಗೆ BBMP ಹಿರಿಯ ಅಧಿಕಾರಿಗಳು ನಮಗೇನು ಗೊತ್ತಿಲ್ಲ. ಇದು BDA ಆಸ್ತಿ, ನಮ್ಮ ವಶಕ್ಕೆ ಕೊಟ್ಟಿಲ್ಲವೆಂದು ಸಬೂಬು ಹೇಳ್ತಿದ್ದಾರೆ.
ಕಾನೂನು ಎಲ್ಲರಿಗೂ ಒಂದೇ. ಆದ್ರೆ ಯಲಹಂಕ ವಲಯ ವಾರ್ಡ್ ನಂ. 8-ಕೊಡಿಗೇಹಳ್ಳಿಗೆ ಸೇರಿದ ಕೋತಿಹೊಸಹಳ್ಳಿ ಸರ್ವೆ ನಂ. 15/1ರಲ್ಲಿ ಎರಡೂವರೆ ಎಕರೆ ಜಾಗಕ್ಕೆ ಕಾನೂನು ಅನ್ವಯ ಆಗ್ತಿಲ್ಲ. ಅಂದ್ರೆ 269000 ಚ. ಅಡಿ ಪಾರ್ಕ್ ಗೆ ಮೀಸಲಿಟ್ಟ ಜಾಗ ಬಲಾಢ್ಯರ ಪಾಲಾಗಿದೆ. 1996ರಲ್ಲಿ ಸರ್ಕಾರ ಭೂಸ್ವಾಧೀನ ಮಾಡಿ CIL ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಲೇಔಟ್ ನಿರ್ಮಾಣ ಜವಾಬ್ದಾರಿ ವಹಿಸಿತ್ತು.
CIL ಎರಡೂವರೆ ಎಕರೆಲಿ ಪಾರ್ಕ್ ನಿರ್ಮಾಣಕ್ಕೆ ಜಾಗ ಮೀಸಲಿಟ್ಟಿತು. BDA ಮತ್ತೆ ಈ ಜಾಗ ಅಭಿವೃದ್ಧಿ ಪಡಿಸಲು ಬಿಬಿಎಂಪಿಗೆ ವರ್ಗಾವಣೆ ಮಾಡಿತ್ತು. ಆದರೆ, ಅಂದಿನಿಂದ ಇಂದಿನವರೆಗೂ ಬಿಬಿಎಂಪಿ ಈ ಎರಡೂವರೆ ಎಕರೆಲಿ ಪಾರ್ಕ್ ಅಭಿವೃದ್ಧಿ ಪಡಿಸಿಲ್ಲ. ಪರಿಣಾಮ ಇಲ್ಲಿ ವಿಶಾಲ್ ಮಾರ್ಟ್, ದೊಡ್ಡ ಬಂಗಲೆ, ಶಾಪಿಂಗ್ ಮಾಲ್, ಅಂಗಡಿಗಳು ತಲೆ ಎತ್ತಿವೆ.
25 ವರ್ಷಗಳಿಂದ ಸುಮ್ಮನಿದ್ದ BBMP ಇದೀಗ ಕೋರ್ಟ್ ಆದೇಶ ಎಂಬ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸ್ತಿದೆ. ಕೊಡಿಗೇಹಳ್ಳಿ ವಾರ್ಡ್ ನ ಕೋತಿಹಿಸಹಳ್ಳಿ ಸರ್ವೆ ನಂ. 52ರ ಒಂದೂವರೆ ಎಕರೆ ಜಾಗದ ಮೇಲೆ ಕಣ್ಣಾಕಿದೆ. ಈ ಭೂಮಿ ಸ್ವಾಧೀನವಾಗಿದ್ರು ಅರ್ಹ ಫಲಾನುಭವಿಗಳಿಗೆ ಪರಿಹಾರ ಸಿಕ್ಕಿಲ್ಲ ಎಂಬ ದಾವೆ ಕೋರ್ಟ್ ನಲ್ಲಿದೆ.
ಬಲಾಢ್ಯರು ಒತ್ತುವರಿ ಮಾಡಿದ ಜಾಗ ತೆರವುಗೊಳಿಸಿ, ಕಾನೂನಾತ್ಮಕವಾಗಿ ನಾವು ಜಮೀನು ಬಿಟ್ಟುಕೊಡ್ತೇವೆ. ಶ್ರೀಮಂತರಿಗೆ ಒಂದು ನ್ಯಾಯ, ಜನಸಾಮಾನ್ಯರಿಗೆ ಒಂದು ನ್ಯಾಯನಾ.!? ಒಂದೂವರೆ ಎಕರೆ ಜಾಗದ ಸ್ವಾಧೀನಾನುಭವಿಗಳು BBMP & ಸರ್ಕಾರವನ್ನು ಪ್ರಶ್ನಿಸಿದ್ದಾರೆ..
ಈ ಬಗ್ಗೆ BBMP ಹಿರಿಯ ಅಧಿಕಾರಿಗಳನ್ನು ಪಬ್ಲಿಕ್ ನೆಕ್ಸ್ಟ್ ಸಂಪರ್ಕಿಸಿದಾಗ, ಅದು BDA ಗೆ ಸೇರಿದ ಜಾಗ. ನಮ್ಮ ಸುಪರ್ದಿಗೆ ಬರುವುದಿಲ್ಲ. ವಾರ್ಡ್ 8ರ ಕೊಡಿಗೇಹಳ್ಳಿಲಿ 5 ಪಾರ್ಕ್ ಗಳಿಗೆ ಮೀಸಲಿಟ್ಟ ಜಾಗದಲ್ಲಿ ಅಭಿವೃದ್ಧಿ ಮಾಡುವ ಸಲುವಾಗಿ ಸ್ವಚ್ಛತೆಗೆ ಮುಂದಾಗಿದ್ದೇವೆ ಎನ್ನುವುದು BBMP ವಾದ. ಹಾಗಾದರೆ 15/1ರ ಎರಡೂವರೆ ಎಕರೆ ಜಾಗ ಅಕ್ರಮವಾಗಿ ಒತ್ತುವರಿ ಮಾಡಿಸಿರುವುದು ಸುಳ್ಳಾ.!? ಈ ಬಗ್ಗೆ BDA ಇತ್ತ ಗಮನ ಹರಿಸಿ, ಒತ್ತುವರಿ ತೆರವು ಗೊಳಿಸಬೇಕಿದೆ. ಇದು ಸಾಧ್ಯವೇ !?
Kshetra Samachara
25/02/2022 12:10 pm