ಬೆಂಗಳೂರು: ಯಲಹಂಕ BBMP ವಲಯ ವಾರ್ಡ್ 11ರ ಕುವೆಂಪುನಗರದ ಸಿಂಗಾಪುರ ಕೆರೆ ಹಿಂಭಾಗದ ಲ್ಯಾಂಡ್ ಮಾರ್ಕ್ ಅಪಾರ್ಟ್ ಮೆಂಟ್ ನಲ್ಲಿ ಒತ್ತುವರಿ ತೆರವು ಕಾರ್ಯ ಮುಂದುವರೆದಿದೆ.
ಕುವೆಂಪುನಗರದ ಮಾಜಿ ಕಾರ್ಪೊರೇಟರ್ ನಂದಿನಿ ಪತಿ ಶ್ರೀನಿವಾಸ್ ಗೆ ಸೇರಿದ ಅಪಾರ್ಟ್ಮೆಂಟ್. ಸಿಂಗಾಪುರದ ಸರ್ವೇ ನಂಬರ್ 97, 98ರಲ್ಲಿರುವ 4 ಅಂತಸ್ತಿನ ಅಪಾರ್ ಮೆಂಟ್ ನಲ್ಲಿ 60ಕ್ಕೂ ಹೆಚ್ಚು ಮನೆಗಳಿವೆ.
ಸಿಂಗಾಪುರ ಕೆರೆ ತೂಬುಗಾಲುವೆ ಜಾಗ ಒತ್ತುವರಿ ಮಾಡಿ ಶ್ರೀನಿವಾಸ್ ಅಪಾರ್ಟ್ ಮೆಂಟ್ ನಿರ್ಮಿಸಿದ್ದಾರೆ. ಇದೀಗ 240 ಮೀಟರ್ ಉದ್ದ, 7 ಅಡಿ ಜಾಗ ಒತ್ತುವರಿ ಮಾಡಲಾಗಿದ್ದು, ತೆರವು ಕಾರ್ಯ ಮುಂದುವರೆದಿದೆ. ಈ ಎಲ್ಲಾ ವಿಷಯ ಕುರಿತು ಅಪಾರ್ಟ್ ಮೆಂಟ್ ಸ್ಥಳದಿಂದ ನಮ್ಮ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ ವಾಕ್ ಥ್ರೂ ಇಲ್ಲಿದೆ...
PublicNext
15/09/2022 03:38 pm