ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜಧಾನಿಯ ಆಡಳಿತ ಚುಕ್ಕಾಣಿ ಹಿಡಿದ ತುಷಾರ್ ಗಿರಿನಾಥ್; ಪಾಲಿಕೆ ಮುಖ್ಯ ಆಯುಕ್ತರಾಗಿ ಅಧಿಕಾರ ಸ್ವೀಕಾರ

ಬೆಂಗಳೂರು; ಬಿಬಿಎಂಪಿಯ ನೂತನ ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕರಿಸಿದರು.

ನಗರದಲ್ಲಿಂದು ಪಾಲಿಕೆ ಕೇಂದ್ರ ಕಚೇರಿಯಲ್ಲಿ ನಿಕಟ ಪೂರ್ವ ಮುಖ್ಯ ಆಯುಕ್ತ ಗೌರವ್ ಗುಪ್ತ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿದ್ದ ತುಷಾರ್ ಗಿರಿನಾಥ್ ರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ನಿನ್ನೆಯಷ್ಟೇ ರಾಜ್ಯ ಸರ್ಕಾರ ಮುಖ್ಯ ಆಯುಕ್ತ ಗೌರವ್ ಗುಪ್ತ ರನ್ನು ವರ್ಗಾವಣೆ ಮಾಡಿತ್ತು. ಗೌರವ್‌ ಗುಪ್ತ ಬಿಬಿಎಂಪಿ ಆಡಳಿತಾಧಿಕಾರಿಯಾಗಿ 2020ರ ಸೆಪ್ಟೆಂಬರ್ 12ರಂದು ಅಧಿಕಾರ ಸ್ವೀಕರಿಸಿದ್ದರು. ನಂತರ 2021ರ ಏಪ್ರಿಲ್ 1ರಂದು ಬಿಬಿಎಂಪಿ ಮುಖ್ಯ ಆಯುಕ್ತ ಹುದ್ದೆಯ ಅಧಿಕಾರ ಸ್ವೀಕರಿಸಿದ್ದರು.

ಅಧಿಕಾರ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಎದುರಿಗೆ ದೊಡ್ಡ ಸವಾಲಿದೆ. ಮುಂದೆ ಕೋವಿಡ್ 4 ನೇ ಅಲೆ ಬರುತ್ತಿದೆ. ಜನರಿಗೆ ಒಳ್ಳೆಯ ಸೇವೆ ಕೊಡಬೇಕೆಂದು ಸಿದ್ದವಾಗಿದ್ದೇವೆ ಎಂದರು.

30 ವರ್ಷ ನಾನು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಪ್ರತಿಯೊಂದು ಹುದ್ದೆಗೆ ತಮ್ಮದೇ ಆದ ಸವಾಲಿರುತ್ತದೆ. ಅದಕ್ಕೆಲ್ಲ ಹೆದುರಿ ಕೂರುವುದಕ್ಕೆ ಆಗುವುದಿಲ್ಲ. ಹೊಸ ಹುದ್ದೆಗೆ ತಕ್ಕಂತೆ ಕೆಲಸ ನಿರ್ವಹಿಸುತ್ತೇನೆ ಎಂದರು.

ಪಾಲಿಕೆಯಲ್ಲಿ ಜನರೊಂದಿಗೆ ನೇರ ಸಂಪರ್ಕ ಇರುತ್ತದೆ. ಸರ್ಕಾರ ನಂಬಿ ಕೆಲಸ ಕೊಟ್ಟಿದೆ. ಇಲ್ಲಿ ಏನಾಗುತ್ತೆ ಪ್ರತಿಯೊಬ್ಬರಿಗೂ ಗೊತ್ತಾಗುತ್ತದೆ. ಸೃಜನಾತ್ಮಕವಾಗಿ ಯೋಚನೆ ಮಾಡಬೇಕು. ಇನ್ನೂ ಸಮಸ್ಯೆಗಳಿಗೆ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಗುಂಡಿ ಮುಕ್ತ ರಸ್ತೆ ಬರಬೇಕೆಂದು ಜನರಿಗೆ ಆಸೆ ಇದೆ. ಹೀಗಾಗಿ ನಾವು ಗುಂಡಿ ಮುಕ್ತ ರಸ್ತೆ ಮಾಡುವುದಾಗಿ ಪ್ರಯತ್ನ ಮಾಡತ್ತೇವೆ. ಬಿ.ಡಬ್ಲೂ.ಎಸ್.ಎಸ್.ಬಿ ಸೇರಿದಂತೆ ಎಲ್ಲ ಇಲಾಖೆಗಳ ಜೊತೆ ಸಂಪರ್ಕ ಇಟ್ಟುಕೊಳ್ಳುತ್ತೇವೆ. ಮೊದಲು ಜನರಿಗೆ ಸ್ಪಂದನೆ ಮಾಡಿಕೊಂಡು ಕ್ರಿಯಾಶೀಲವಾಗಿ ಕೆಲಸ ಮಾಡುವ ವ್ಯವಸ್ಥೆ ಆಗಬೇಕು ಎಂದು ತುಷಾರ್ ಗಿರಿನಾಥ್ ನುಡಿದರು.

Edited By :
Kshetra Samachara

Kshetra Samachara

06/05/2022 07:33 pm

Cinque Terre

3.35 K

Cinque Terre

0

ಸಂಬಂಧಿತ ಸುದ್ದಿ