ಬಿಬಿಎಂಪಿ ಚುನಾ ವಣೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಹೊಸ ವಾತಾವರಣವೇ ಗರಿಗೆದರಿದೆ.
ಇತ್ತ ಪಾಲಿಕೆಯ ನೂತನ ಸದಸ್ಯರಿಗಾಗಿ ಹೊಸ ಕೌನ್ಸಿಲ್ ಹೌಸ್ ತಲೆ ಎತ್ತುತ್ತಿದೆ. ಈ ಸಂಬಂಧ ಕೆಂಪೇಗೌಡ ಪೌರ ಸಭಾಂಗಣಕ್ಕೆ ಹೊಸ ಆಕಾರ ನೀಡಲಿದ್ದು, ಇದಕ್ಕೆ ಆಡಳಿತಾಧಿಕಾರಿಯಿಂದ ಅನುಮತಿಯೂ ಸಿಕ್ಕಿದೆ.
ಮತ್ತೊಂದೆಡೆ ವಾರ್ಡ್ ವಿಂಗಡಣೆಯಂತೆ ಈ ಬಾರಿ ಬಿಬಿಎಂಪಿ ಚುನಾವಣೆ ನಡೆಯುತ್ತಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳ ಕೌನ್ಸಿಲ್ ಕಟ್ಟಡವನ್ನೂ ವಿನ್ಯಾಸಗೊಳಿಸಲಾಗುತ್ತಿದೆ.
ಬಿಬಿಎಂಪಿಯಲ್ಲಿ 198 ವಾರ್ಡ್ಗಳಿದ್ದು, ವಿಂಗಡಣೆ ನಂತರ 243 ವಾರ್ಡ್ ಆಗಲಿದೆ. ಈ ಹಿನ್ನೆಲೆಯಲ್ಲಿ ಕೌನ್ಸಿಲ್ ಕಟ್ಟಡ ಮರು ವಿನ್ಯಾಸದ ಜೊತೆಗೆ ಹೈಟೆಕ್ ತಂತ್ರಜ್ಞಾನ ಅಳವಡಿಕೆಗೆ ಸಿದ್ಧತೆ ನಡೆಸಲಾಗುತ್ತಿದೆ.
ಇದಕ್ಕಾಗಿ 10 ಕೋಟಿ ರೂ. ವೆಚ್ಚದಲ್ಲಿ ಪಾಲಿಕೆ ಕೌನ್ಸಿಲ್ ಕಟ್ಟಡ ಮರು ವಿನ್ಯಾಸ ಮಾಡಲಾಗುತ್ತಿದೆ. ಇದುವರೆಗೂ 270 ಮಂದಿ ಆಸನಗಳ ಅವಕಾಶವಿದ್ದ ಕೌನ್ಸಿಲ್ ಸಭಾಂಗಣ ಪಾಲಿಕೆ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು, ಶಾಸಕರು, ಸಂಸದರು ಪರಿಷತ್ ಸದಸ್ಯರಿಗೆ 270 ಸ್ಥಾನ ಸೀಮಿತವಾಗಿತ್ತು. ಈಗ ಪಾಲಿಕೆ ಕೌನ್ಸಿಲ್ 364 ಮಂದಿಗೆ ಕುರ್ಚಿಗಳ ಸಂಖ್ಯೆ ಏರಿಸುತ್ತಿದೆ.
Kshetra Samachara
27/05/2022 05:30 pm