ಆನೇಕಲ್: ನೀರಿನ ಭವಣೆಯನ್ನ ಶಾಶ್ವತವಾಗಿ ನೀಗಿಸುವ ಸಲುವಾಗಿ ವಿಶೇಷ ಅನುದಾನದಲ್ಲಿ ಸುಮಾರು 2 ಕೋಟಿ ಹಣವನ್ನು ಮರಸೂರು ಪಂಚಾಯಿತಿ ಅಕೌಂಟ್ಗೆ ಬಿಡುಗಡೆ ಮಾಡಲಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಂಡಾಪುರ ರಾಮಚಂದ್ರ ತಿಳಿಸಿದರು.
ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡಾಪುರದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಚೇತನರಿಗೆ ಸಹಾಯಧನ ಹಾಗೂ ಮಹಿಳೆಯರಿಗೆ ಹೊಲಿಗೆ ಯಂತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮರಸೂರು ಗ್ರಾಮ ಪಂಚಾಯಿತಿಯಲ್ಲಿ ನೀರಿನ ಸಮಸ್ಯೆ ಸಾಕಷ್ಟಿದ್ದು ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಊರಿನ ಮುಖಂಡರು ಎಂಪಿ ನಾರಾಯಣಸ್ವಾಮಿ ಮುಖೇನ ವಸತಿ ಸಚಿವರಿಗೆ ನೀರಿನ ಸಮಸ್ಯೆ ಬಗ್ಗೆ ತಿಳಿಸಿದರು.
ಶಾಶ್ವತವಾಗಿ ಪರಿಹಾರಕ್ಕಾಗಿ ಸುಮಾರು ಎರಡು ಕೋಟಿ ಹಣವನ್ನು ಪಂಚಾಯತಿ ಅಕೌಂಟ್ಗೆ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಗ್ರಾಮಸ್ಥರು ಸಚಿವರಿಗೆ ಹಾಗೂ ಮಂತ್ರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
Kshetra Samachara
03/08/2022 05:40 pm