ಬೆಂಗಳೂರು: ಅಂದು ಬಿಬಿಎಂಪಿ ಕೋವಿಡ್ ಡ್ಯೂಟಿಗಾಗಿ ವೈದ್ಯರನ್ನು ನೇಮಿಸಿತ್ತು. ಆದರೆ, ಈಗ ಯಾವುದೇ ಸೂಚನೆ ನೀಡದೆ ಬಿಬಿಎಂಪಿ ಆ ವೈದ್ಯರನ್ನು ಕೆಲಸದಿಂದ ತೆಗೆದು ಹಾಕಿದೆ!
ಬೆಂಗಳೂರಿನಲ್ಲಿ ಕೋವಿಡ್ ಸಂಕಷ್ಟ ಸಮಯದಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆಯನ್ನು ಎದುರಿಸುತ್ತಿರುವಾಗ ಬಿಬಿಎಂಪಿ ನೂರಾರು ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿತ್ತು.
ಎಂಬಿಬಿಎಸ್ ಪದವಿ ಪಡೆದ ವೈದ್ಯರು, ಆಯುಷ್ ವೈದ್ಯರು, ದಂತವೈದ್ಯರು ಬಿಬಿಎಂಪಿ ಕಾರ್ಯ ವ್ಯಾಪ್ತಿಗೆ ಸೇರಿದ್ದರು. ಈ ವೈದ್ಯರನ್ನು ಕೋವಿಡ್ ಕೇರ್ ಸೆಂಟರ್, ಹೋಮ್ ಐಸೋಲೇಶನ್ ಭೇಟಿ ಮತ್ತು ಮನೆ- ಮನೆಗೆ ಸಮೀಕ್ಷೆಗೆ ಬಳಸಿಕೊಳ್ಳಲಾಯಿತು. ಈಗ ಈ ವೈದ್ಯರಿಗೆ ಮಾಹಿತಿ ನೀಡದೆಯೇ ಕರ್ತವ್ಯದಿಂದ ತೆಗೆದು ಹಾಕಲಾಗಿದ್ದು, 3 ತಿಂಗಳ ವೇತನವೂ ಬಾಕಿ ಇದೆ!
ಕೋವಿಡ್ ವೀರರಿಗೆ ಬಿಬಿಎಂಪಿಯಲ್ಲಿಯೇ ಉದ್ಯೋಗ ನೀಡಬೇಕಿತ್ತು. ಆದರೆ, ಬಿಬಿಎಂಪಿ ಆ ವೈದ್ಯರನ್ನೇ ಕೆಲಸದಿಂದ ಕಿತ್ತು ಹಾಕಿದೆ.
ವೈದ್ಯರೀಗ ಬಿಬಿಎಂಪಿಗೆ ಕೆಲಸ ನೀಡುವಂತೆ ಮನವಿ ಮಾಡುತ್ತಿದ್ದಾರೆ. bbmp ನಮ್ಮ ಕೋವಿಡ್ ಹೀರೋಗಳಿಗೆ ಈ ರೀತಿಯಾಗಿ ʼಬಹುಮಾನʼ ಕೊಟ್ಟಿರುವುದು ಸರಿಯೇ? ಇದ್ಯಾವ ನ್ಯಾಯ!? bbmp ತನ್ನ ತಪ್ಪನ್ನು ತಿದ್ದಿಕೊಂಡು, ಕೃತಘ್ನತೆ ತೋರದೆ ಈ ವೈದ್ಯರನ್ನೆಲ್ಲ ಮರು ನೇಮಕಾತಿ ಮಾಡಿಕೊಂಡು ಕೆಲಸ ನೀಡಿ, ನ್ಯಾಯ ಒದಗಿಸಬೇಕಾಗಿದೆ.
ನವೀನ್, ʼಪಬ್ಲಿಕ್ ನೆಕ್ಸ್ಟ್ʼಬೆಂಗಳೂರು
PublicNext
29/03/2022 10:29 pm