ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಿಕ್ಷಣ ತಜ್ಞ ಸೌಂದರ್ಯ ಮಂಜಪ್ಪ,ಯುವ ಉದ್ಯಮಿ ಕೀರ್ತನ್ ಕುಮಾರ್ ಎಎಪಿ ಸೇರ್ಪಡೆ!

ಬೆಂಗಳೂರು:ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು – ಕೆಪಿಸಿಸಿ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿದ್ದ ಹಾಗೂ ಶಿಕ್ಷಣ ತಜ್ಞ ಸೌಂದರ್ಯ ಮಂಜಪ್ಪ ಹಾಗೂ ಅವರ ಮಗ ಕೀರ್ತನ್ ಕುಮಾರ್‌ರವರು ಇಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ಉಪಾಧ್ಯಕ್ಷ ಭಾಸ್ಕರ್ ರಾವ್‌ರವರ ಸಮ್ಮುಖದಲ್ಲಿ ಆಮ್‌ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಸೌಂದರ್ಯ ಮಂಜಪ್ಪರವರ ಮಗ ಕೀರ್ತನ್ ಕುಮಾರ್‌ರವರು ಪ್ರಸ್ತುತ ಸೌಂದರ್ಯ ಎಜುಕೇಷನಲ್‌ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಕೀರ್ತನ್ ರವರು ಲಂಡನ್‌ನಲ್ಲಿ ಎಂಬಿಎ ವ್ಯಾಸಂಗ ಮಾಡಿ ಅಲ್ಲಿನ ಶೈಕ್ಷಣಿಕ ಸ್ಥಿತಿಗತಿಗಳು ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಇದೇ ರೀತಿಯ ಮಾದರಿ ಭಾರತದಲ್ಲೇಕೆ ಆಗುತ್ತಿಲ್ಲ ಎಂದು ತಮಗೆ ತಾವೇ ಪ್ರಶ್ನಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿಯೇ ದೆಹಲಿ ಮಾದರಿಯ ಅರವಿಂದ್ ಕೇಜ್ರಿವಾಲ್ ರವರ ಮಾದರಿ ಮೆಚ್ಚಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.

ನಮ್ಮ ಆಡಳಿತ ಮಾದರಿ ಯುವಕರಿಗೆ ಅವಕಾಶ ಸೃಷ್ಟಿಸವಂತಾದರೆ, ನಾವು ಜಗತ್ತನ್ನೇ ಗೆಲ್ಲಬಹುದು. ಕೇಜ್ರಿವಾಲ್ ಮಾದರಿಯ ರಾಜಕೀಯ ಆಂದೋಲನದಲ್ಲಿ ನಾನೂ ಸಹ ನೇರ ಭಾಗವಹಿಸುವಿಕೆ ಆದಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಮನಗಂಡು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂಬ ಮಾತನ್ನು ಕೀರ್ತನ್ ಹೇಳಿದರು.‌

ಮಂಜಪ್ಪನವರು ಸೌಂದರ್ಯ ಎಜುಕೇಷನಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷರಾಗಿ 6000 ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ 500 ಮಂದಿಗೆ ಉದ್ಯೋಗ ನೀಡುತ್ತಿದ್ದಾರೆ. ಸೌಂದರ್ಯ ಮಂಜಪ್ಪನವರು ಹೋಟೆಲ್ ಉದ್ಯಮಿ ಕೂಡ ಹೌದು. ಅವರು ದಾಸರಹಳ್ಳಿ ಕ್ಷೇತ್ರದ ಸೌಂದರ್ಯ ನಗರ ನಿವಾಸಿಗಳ ಹಿತರಕ್ಷಣಾ ಸಂಘಟನೆಯ ಗೌರವಾಧ್ಯಕ್ಷರು, ಕರಾವಳಿ ಮಿತ್ರಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಹಾವನೂರ್‌ ಎಕ್ಸ್‌ಟೆನ್ಷನ್‌ನ ಅಧ್ಯಕ್ಷರು.

ನೆರೆ ಪರಿಹಾರ ಸಂತ್ರಸ್ತರಿಗೆ ಆರ್ಥಿಕ ಸಹಾಯ, ಸ್ವಂತ ಉದ್ಯೋಗಾಸಕ್ತ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ಬಡವರಿಗೆ ಪಡಿತರ ವಿತರಣೆ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಬ್ಯಾಗ್‌ ಹಾಗೂ ರಿಯಾಯಿತಿ ಶಿಕ್ಷಣ ನೀಡುವುದು – ಮುಂತಾದ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Edited By : Somashekar
PublicNext

PublicNext

05/08/2022 08:08 pm

Cinque Terre

27.36 K

Cinque Terre

2

ಸಂಬಂಧಿತ ಸುದ್ದಿ