ವರದಿ: ಗೀತಾಂಜಲಿ
ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನ ಸರ್ಕಾರದ ಸ್ವತ್ತು ಎಂಬುದಕ್ಕೆ ನಾಗರಿಕ ಒಕ್ಕೂಟ ಮತ್ತೊಂದು ದಾಖಲೆ ಬಿಡುಗಡೆ ಮಾಡಿದೆ. ದಾಖಲೆಯಲ್ಲಿ ಮೈಸೂರು ಸಂಸ್ಥಾನದ ಅಧೀನಕ್ಕೆ ಒಳಪಡುವ ಸ್ವತ್ತು ಎಂದು ಉಲ್ಲೇಖವಾಗಿದೆ.
1950ರಲ್ಲೇ ಮೈದಾನ ಮೈಸೂರು ಸಂಸ್ಥಾನದ ಅಧೀನಕ್ಕೆ ಒಳಪಟ್ಟಿತ್ತು. ಮೈದಾನ ಯಾವುದೇ ದರ್ಗಾಕ್ಕೆ ನೀಡಿಲ್ಲ. ಇದು ಸರ್ಕಾರಿ ಸ್ವತ್ತು ಎಂದು ಗಡಿ ಸಮೇತ ಉಲ್ಲೇಖವಾಗಿರುವ ದಾಖಲೆಯನ್ನು ಒಕ್ಕೂಟ ಬಿಡುಗಡೆ ಮಾಡಿದೆ. ಬೆಂಗಳೂರಿಗೆ ಮೊತ್ತ ಮೊದಲ ಲೇಔಟ್ ಆಗಿದ್ದೇ ಚಾಮರಾಜಪೇಟೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದಲ್ಲಿ ಆದ ಲೇಔಟ್. ತನ್ನ ತಂದೆಯ ನೆನಪಿನಲ್ಲಿ ಲೇಔಟ್ ನಿರ್ಮಿಸಲಾಗುತ್ತದೆ. ಯೋಜಿತ ಮೊದಲ ಲೇಔಟ್ ಚಾಮರಾಜಪೇಟೆಯಲ್ಲಿ ಸಂತೆಗೆ ಎಂದು ಮೀಸಲಿರಿಸಲಾಗುತ್ತೆ. ನಂತರ ಇದು ಆಟದ ಮೈದಾನವಾಗಿ ಬಳಕೆಯಾಗುತ್ತದೆ ಎಂದು ದಾಖಲೆ ಬಿಡುಗಡೆ ಮಾಡಲಾಗಿದೆ.
PublicNext
17/07/2022 07:03 pm