ಅನೇಕಲ್: ಸರ್ಜಾಪುರ ಗ್ರಾಮ ಪಂಚಾಯಿತಿ ಯಲ್ಲಿ ಅಧ್ಯಕ್ಷರ ಸ್ಥಾನ ತೆರವಾದ ಹಿನ್ನೆಲೆಯಲ್ಲಿ ಇಂದು ನಡೆದ ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ್ ಬುಡಗಪ್ಪ ಆಯ್ಕೆಯಾಗಿದ್ದಾರೆ..
ಇನ್ನು ಸರ್ಜಾಪುರ ಗ್ರಾಮ ಪಂಚಾಯಿತಿಯಲ್ಲಿ 30 ಜನ ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯಿತಿಯಲ್ಲಿ ಎಸ್.ಎಂ ಶ್ರೀನಿವಾಸ್ ರಾಜೀನಾಮೆ ಯಾದ ಹಿನ್ನೆಲೆಯಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಿಗದಿಯಂತೆ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಟ್ಟು 02 ಸದಸ್ಯರು ನಾಮಪತ್ರ ಸಲ್ಲಿಸಿದರು, 20 ಮತಗಳನ್ನು ಪಡೆದು ಎಸ್.ವಿ ಶ್ರೀನಿವಾಸ್ ಬುಡಗಪ್ಪ ರವರು ಜಯಶೀಲರಾದರೇ, ಪ್ರತಿ ಸ್ಪರ್ಧಿಯಾದ ರೇಣುಕಮ್ಮ ರವರು 10ಮತಗಳನ್ನು ಪಡೆದು ಪರಾಭವಗೊಂಡರು.
ಸುದ್ದಿಗಾರರೊಂದಿಗೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಶ್ರೀನಿವಾಸ್ ಬುಡಗಪ್ಪ ಮಾತನಾಡಿ, ಸರ್ಜಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಎಲ್ಲಾ ವಾರ್ಡ್ ನಲ್ಲೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು. ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ, ಕುಡಿಯುವ ನೀರು, ಪ್ರತಿಯೊಬ್ಬರಿಗೂ ವಿದ್ಯುತ್ ಮತ್ತು ಮನೆ ಇಲ್ಲದವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಲಾಗುವುದು ಹಾಗೂ ಈ ಹಿಂದಿನಿಂದಲೂ ನನಗೆ ಗ್ರಾಮಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲವಿತ್ತು ಹೀಗಾಗಿ ಗ್ರಾಪಂ ಚುನಾವಣೆಯಲ್ಲಿ ನಿಂತು ಗ್ರಾಮಸ್ಥರ ಬೆಂಬಲದಿಂದ ಸದಸ್ಯನಾಗಿ ಆಯ್ಕೆಯಾದೆ.
ಈಗ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ನನ್ನ ಅಧಿಕಾರವಧಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಳ್ಳೆ ಕೆಲಸ ಮಾಡುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಮತ್ತು ಸರ್ಕಾರದಿಂದ ಪಂಚಾಯಿತಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮವನ್ನು ಅಭಿವೃದ್ಧಿ ಮಾಡುವ ಗುರಿ ಇದೆ. ನನ್ನ ಅಧಿಕಾರ ಅವಧಿಯಲ್ಲಿ ಹೊಸ ಬದಲಾವಣೆ ತರಬೇಕು ಎಂಬ ಹಂಬಲವಿದೆ ಎಂದು ತಿಳಿಸಿದರು.
ಶಾಸಕ ಬಿ ಶಿವಣ್ಣ ಮಾತನಾಡಿ, ಸರ್ಜಾಪುರ ಗ್ರಾಮ ಪಂಚಾಯಿತಿಗೆ ಈಗಾಗಲೇ ನನ್ನ ಶಾಸಕರ ವಿಶೇಷ ಅನುದಾನದಲ್ಲಿ ಸುಮಾರು 05 ರಿಂದ 06 ಕೋಟಿ ಅನುದಾನ ನೀಡಿ ಅಭಿವೃದ್ಧಿ ಪಡಿಸಲಾಗಿದೆ ಇಂದ ನಡೆದ ಚುನಾವಣೆಯಲ್ಲಿ ಎಸ್.ವಿ ಶ್ರೀನಿವಾಸ ಬುಡಗಪ್ಪ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸರ್ಜಾಪುರ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿರುವುದು ಸಂತೋಷದ ಸಂಗತಿ ಮುಂದಿನ ದಿನಗಳಲ್ಲಿ ಸರ್ಜಾಪುರ ಗ್ರಾಮ ಪಂಚಾಯಿತಿಗೆ ನನ್ನ ಅನುದಾನದ ಅಡಿಯಲ್ಲಿ ಇನ್ನೂ ಹೆಚ್ಚು ಹೊತ್ತು ನೀಡಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಸರ್ಜಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಸ್.ವೈ ಶಂಭಯ್ಯ, ಎಸ್.ಎಂ ಶ್ರೀನಿವಾಸ್, ಜಗದೀಶ್ ಬಾಬು, ಉಪಾಧ್ಯಕ್ಷ ಸುನೀತಾ ಶಶಿಧರ್, ಸದಸ್ಯರಾದ ನವೀನ್ ಕುಮಾರ್, ಎ.ಸತೀಶ್ ಕುಮಾರ್, ಭರತ್, ಓಂ ಶಕ್ತಿ ಮಂಜುನಾಥ್, ವೆಂಕಟೇಶ್, ಮಮತಾ, ನಸೀಬ್ ಹುನ್ನೀಸಾ,ವೀಣಾ, ಲಲಿತಮ್ಮ, ಚಂದ್ರಕಲಾ, ಶಾಹಜನ್ ಹುನ್ನೀಸಾ, ಶ್ವೇತಾ ಕುಮಾರಿ, ಮುಖಂಡರಾದ ಮಂಜೇಗೌಡ,ಶ್ರೀಧಾರ್, ವಾಜೀದ್ ಹಾಗೂ ಮತ್ತಿತ್ತರರು ಹಾಜರಿದ್ದರು.
Kshetra Samachara
15/07/2022 07:17 pm